ವಿಂಡೀಸ್ ವಿರುದ್ಧ 125 ರನ್ ಗಳ ಭರ್ಜರಿ ಗೆಲುವಿನೊಂದಿಗೆ 'ಸೆಮಿಸ್ 'ಹೊಸ್ತಿಲಲ್ಲಿ ಟೀಂ ಇಂಡಿಯಾ

ಒಲ್ಡ್ ಟ್ರಪೊಲ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 125 ರನ್ ಗಳ ಭಾರೀ ಅಂತರದೊಂದಿಗೆ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸೆಮಿ ಫೈನಲ್ ಹೊಸ್ತಿಲಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮ್ಯಾಂಚೆಸ್ಟರ್ :  ಒಲ್ಡ್ ಟ್ರಪೊಲ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 125 ರನ್ ಗಳ ಭಾರೀ ಅಂತರದೊಂದಿಗೆ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಸೆಮಿ ಫೈನಲ್ ಹೊಸ್ತಿಲಲ್ಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ ನಿಗದಿತ 50 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 268 ರನ್ ಗಳಿಸುವ ಮೂಲಕ  ವೆಸ್ಟ್ ಇಂಡೀಸ್ ಗೆಲ್ಲಲು 269 ರನ್ ಗಳ ಗುರಿಯನ್ನು ನೀಡಿತು.
ಆರಂಭಿಕ ಆಟಗಾರ ರೋಹಿತ್ ಶರ್ಮಾ 18 ರನ್ ಗಳಿಗೆ ಆಟ ಮುಗಿಸಿದರೆ, ರಾಹುಲ್ (48)  ವಿರಾಟ್ ಕೊಹ್ಲಿ72 ರ ಧೋನಿ ಅಜೇಯ 56, ಹಾರ್ದಿಕ್ ಪಾಂಡ್ಯ 46 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ಗೆಲಲ್ಲು 269 ರನ್ ಗಳ ಟಾರ್ಗೆಟ್ ನೀಡಿತ್ತು.
ಈ ಗೆಲುವಿನ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್  ಆರಂಭಿಕ ಆಟಗಾರ ಕ್ರಿಸ್ ಗೇಲ್  6 ರನ್ ಗಳಿಗೆ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಜಾಧವ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಸುನೀಲ್ ಆಂಬ್ರೀಸ್ 31 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಎಲ್ ಬಿಡಬ್ಲ್ಯೂಗೆ ಬಲಿಯಾದರು.
 ಎಸ್ ಡಿಹೋಪ್ 5. ಎನ್ ಪೂರಾನ್ 28, ಹೆಟ್ಮಿಯಲ್ 18,  ಜೆಡಿ ಹೊಲ್ಡರ್ 6, ಬ್ರಾಥ್ ವೇಟ್ 1, ಅಲೆನ್ 0, ಕಾಜ್ ರೊಚ್ 14, ಎಸ್ ಎಸ್ ಕಾಟ್ಟೆಲ್ 10 ರನ್ ಗಳಿಗೆ ಔಟಾಗಿ ಫೆವಿಲಿಯನ್ ಪರೇಡ್ ನಡೆಸಿದರು. 
ಇದರಿಂದಾಗಿ ವೆಸ್ಟ್ ಇಂಡೀಸ್  34 .2 ಓವರ್ ಗಳಲ್ಲಿ 143 ರನ್ ಗಳಿಗೆ ಆಲೌಟ್ ಆಯಿತು.  ಭಾರತದ ಪರ ಮೊಹಮ್ಮದ್ ಶಮಿ 4, ಬೂಮ್ರಾ 2, ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್  ತಲಾ 1, ಚಾಹೆಲ್ 2 ವಿಕೆಟ್ ಪಡೆಯುವ ಮೂಲಕ ಸೆಮಿ ಫೈನಲ್ ಹೊಸ್ತಿಲಿನಲ್ಲಿ ಟೀಂ ಇಂಡಿಯಾವನ್ನು ತಂದು ನಿಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com