ವಿಶ್ವಕಪ್ ಕ್ರಿಕೆಟ್: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಗೆ 9 ವಿಕೆಟ್ ಗೆಲುವು

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್ ಅಂತರದಿಂದ ಗೆಲುವು ದಾಖಲಿಸಿದೆ. ಇದರಿಂದಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವೆನಿಸಿದೆ.

Published: 28th June 2019 12:00 PM  |   Last Updated: 29th June 2019 12:01 PM   |  A+A-


South Africa players

ದಕ್ಷಿಣ ಆಫ್ರಿಕಾ ಆಟಗಾರರು

Posted By : ABN ABN
Source : The New Indian Express
ಲಂಡನ್ :ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್  ಅಂತರದಿಂದ  ಗೆಲುವು ದಾಖಲಿಸಿದೆ.  ಇದರಿಂದಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತಿರುವ ಶ್ರೀಲಂಕಾ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವೆನಿಸಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 49.3 ಓವರ್ ಗಳಲ್ಲಿ 203 ರನ್ ಗಳಿಗೆ  ಆಲೌಟ್ ಆಯಿತು.  ಪಂದ್ಯದ ಪ್ರಥಮ ಎಸೆತದಲ್ಲೇ ಲಂಕಾ ನಾಯಕ ದಿಮುತ್ ಕರುಣಾರತ್ನೆರನ್ನು   ಡೆಕ್ ಔಟ್ ಮಾಡಿದ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಡ ಲಂಕಾಗೆ ಆರಂಭಿಕ ಆಘಾತ ನೀಡಿದರು. 

ನಂತರ ಕುಸಾಲ್ ಪರೇರಾ ಹಾಗೂ ಅವಿಷ್ಕ ಫೆರ್ನಾಂಡೊ ಜೊತೆಯಾಟದಲ್ಲಿ  67 ರನ್ ಬಂದಿತು. ಆದರೆ, 72 ರನ್ ಆಗುವಷ್ಟರಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡು ಮತ್ತೊಮ್ಮೆ ಸಂಕಷ್ಟಕ್ಕೊಳಗಾಯಿತು.

ನಂತರ ಕುಸಾಲ್ ಮೆಂಡಿಸ್ 23, ಏಂಜೆಲೋ ಮ್ಯಾಥ್ಯೂಸ್ 11, ಧನಂಜಯ ಡಿಸಿಲ್ವ 24, ಹಾಗೂ ಜೀವನ್ ಮೆಂಡಿಸ್ 18 ರನ್ ಗಳಿಸಿ ಫೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ 39.5 ಓವರ್ ಗಳಲ್ಲಿ 163 ರನ್ ಗಳಿಸುವಷ್ಟರಲ್ಲಿ ಏಳು ವಿಕೆಟ್ ಕಳೆದುಕೊಂಡು ಲಂಕಾ ತಂಡ ಭಾರಿ ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ 49.3 ಓವರ್ ಗಳಲ್ಲಿ 203 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು.

ಈ ಗೆಲುವಿನ ಗುರಿ ಬೆನ್ನತ್ತಿದ್ದ  ದಕ್ಷಿಣ ಆಫ್ರಿಕಾ 37.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರರಾದ  ಡಿಕಾಕ್ 15, ಎಚ್ ಎಂ ಆಮ್ಲಾ 80 ಹಾಗೂ  ಡು ಪ್ಲೆಸಿಸ್ 96 ರನ್ ಗಳಿಸಿದರು. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp