ಎಂಎಸ್ ಧೋನಿ 'ಆಟದ ದಂತಕತೆ' ಎಂದು ಶ್ಲಾಘಿಸಿದ ವಿರಾಟ್ ಕೊಹ್ಲಿ

ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಎಂ.ಎಸ್‌ ಧೋನಿ ಅವರು "ಆಟದ ದಂತಕಥೆ" ಇದ್ದಂತೆ. ಆಟದ ಬಗ್ಗೆ ಅವರ ತಿಳುವಳಿಕೆ ಮತ್ತು ಅನುಭವವು ತಂಡವನ್ನು ಉತ್ತಮ...
ಎಂಎಸ್ ಧೋನಿ, ವಿರಾಟ್ ಕೊಹ್ಲಿ
ಎಂಎಸ್ ಧೋನಿ, ವಿರಾಟ್ ಕೊಹ್ಲಿ
ಮ್ಯಾಂಚೆಸ್ಟರ್‌: ಟೀಂ ಇಂಡಿಯಾದ ಮಾಜಿ ನಾಯಕ, ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಎಂ.ಎಸ್‌ ಧೋನಿ ಅವರು "ಆಟದ ದಂತಕಥೆ" ಇದ್ದಂತೆ. ಆಟದ ಬಗ್ಗೆ ಅವರ ತಿಳುವಳಿಕೆ ಮತ್ತು ಅನುಭವವು ತಂಡವನ್ನು ಉತ್ತಮ ಸ್ಥಾನದಲ್ಲಿರಿಸಿದೆ. ಕಳೆದ ಹಲವು ವರ್ಷಗಳಲ್ಲಿ ಇವರ ಅವಧಿಯಲ್ಲಿ ಅನೇಕ ಪಂದ್ಯಗಳನ್ನು ಭಾರತ ಗೆದ್ದಿದೆ ಎನ್ನುವ ಮೂಲಕ ಮಾಜಿ ನಾಯಕನ ಬೆನ್ನಿಗೆ ನಾಯಕ ವಿರಾಟ್‌ ಕೊಹ್ಲಿ ನಿಂತರು.
ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧದ ಪಂದ್ಯದಲ್ಲಿ 125 ರನ್‌ಗಳಿಂದ ಭಾರತ ಜಯಿಸಿದ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಏನು ಅಗತ್ಯವಿದೆ ಎಂಬುದು ಅವರಿಗೆ ತಿಳಿದಿದೆ. ಯಾವಾಗ ಅವರು ಪಂದ್ಯದಲ್ಲಿ ವೈಫಲ್ಯ ಅನುಭವಿಸುತ್ತಾರೆ. ಆಗ ಎಲ್ಲರು ಧೋನಿಯನ್ನು ಟೀಕಿಸಲು ಮುಂದಾಗುತ್ತಾರೆ. ಆದರೆ, ನಾವು ಅವರ ಬೆನ್ನಿಗೆ ಸದಾ ಇರುತ್ತೇವೆ. ಹಲವು ಪಂದ್ಯಗಳಲ್ಲಿ ಅವರು ನಮಗೆ ಗೆಲುವು ತಂದುಕೊಟ್ಟಿದ್ದಾರೆ. ತಂಡಕ್ಕೆ 15 ರಿಂದ 20 ರನ್‌ ಅಗತ್ಯವಿದ್ದಾಗ ಅದನ್ನು ಬೆನ್ನತ್ತುವ ಕೌಶಲ ಧೋನಿ ಬಳಿ ಇದೆ ಎಂದು ಶ್ಲಾಘಿಸಿದರು. 
ನಾವು ಸಹಜ ಕ್ರಿಕೆಟ್ ಆಡುವ ಮತ್ತು ಅವರ ಆಟದ ಯೋಜನೆಗಳನ್ನು ಅನುಸರಿಸುವ ಕೆಲವೇ ಆಟಗಾರರನ್ನು ಹೊಂದಿದ್ದೇವೆ. ಆದರೆ, ಧೋನಿಗೆ ಪಂದ್ಯದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ. ಈ ಅಂಗಳದಲ್ಲಿ 260 ರನ್‌ ಕಲೆಹಾಕಿದರೆ ಗೆಲುವು ಸಾಧಿಸಬಹುದೆಂದು ಅವರು ಮೊದಲೇ ಹೇಳಿದ್ದರು. ಹಾಗಾಗಿ, ಧೋನಿ ಅರ್ಧ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಇವರು ಸದಾ ನಮಗೆ ದಂತಕತೆ ಇದ್ದಂತೆ ಎಂದು ಕೊಹ್ಲಿ, ಧೋನಿಯನ್ನು ಶ್ಲಾಘಿಸಿದರು. 
ಅಫ್ಘಾನಿಸ್ತಾನದ ವಿರುದ್ಧ ಎಂ.ಎಸ್‌ ಧೋನಿ ನಿಧಾನಗತಿಯ ಬ್ಯಾಟಿಂಗ್‌ ಮಾಡಿದ್ದರು. 52 ಎಸೆತಗಳಲ್ಲಿ 28 ರನ್‌ ಮಾತ್ರ ಗಳಿಸಿದ್ದರು. ಅಂತಿಮವಾಗಿ ಭಾರತ 224 ರನ್‌ಗಳಿಗೆ ಸೀಮಿತವಾಗಿತ್ತು. ಆದರೆ, ಜಸ್ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿ ಶಿಸ್ತುಬದ್ಧ ಬೌಲಿಂಗ್‌ ನೆರವಿನಿಂದ ಭಾರತ ಗೆಲುವು ಸಾಧಿಸಿತ್ತು. 
ಧೋನಿ ನಿಧಾನಗತಿಯ ಬ್ಯಾಟಿಂಗ್‌ಗೆ ಸಚಿನ್‌ ತೆಂಡೂಲ್ಕರ್‌ ಬೇಸರ ವ್ಯಕ್ತಪಡಿಸಿದ್ದರು. ಧೋನಿ ಇನ್ನಷ್ಟು ಧನಾತ್ಮಕವಾಗಿ ಬ್ಯಾಟಿಂಗ್‌ ಮಾಡಬೇಕು ಎಂದು ಹೇಳಿದ್ದರು. ವಿಂಡೀಸ್‌ ವಿರುದ್ಧ ಕಳೆದ ಪಂದ್ಯದಲ್ಲೂ ಧೋನಿ ಆರಂಭದಲ್ಲಿ 40 ಎಸೆತಗಳಲ್ಲಿ 20 ರನ್‌ ಗಳಿಸಿದ್ದರು. ಆದರೆ, ಅಂತಿಮವಾಗಿ 61 ಎಸೆತಗಳಿಗೆ 56 ರನ್‌ ಗಳಿಸಿದರು. ಇದರಿಂದಾಗಿ ಭಾರತ ಕೊನೆಯದಾಗ ವಿಂಡೀಸ್‌ಗೆ 269 ರನ್‌ ಗುರಿ ನೀಡಿತು. 
ಈ ಕುರಿತು ಮಾತನಾಡಿದ ಕೊಹ್ಲಿ, ಕಳೆದ ಎರಡು ಪಂದ್ಯಗಳಲ್ಲಿ ನಾವು ಇಚ್ಛಿಸಿದಂತೆ ಬ್ಯಾಟಿಂಗ್‌ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ ಯಶಸ್ವಿಯಾಗಿದ್ದೇವೆ. ಆದರೆ, ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ಕಾಣುವುದು ಅಗತ್ಯ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com