ಕಣ್ಣು ಕಾಣಲಿಲ್ವ 'ಥರ್ಡ್ ಅಂಪೈರ್': ಔಟ್ ತೀರ್ಪು ನೋಡಿ ಹಣೆ ಚಚ್ಚಿಕೊಂಡ ರೋ'ಹಿಟ್' ಶರ್ಮಾ!

ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ಗಳು ಎಡವಟ್ಟು ಮಾಡುವುದು ಸಾಮಾನ್ಯವಾಗಿತ್ತು. ಆದರೆ ಥರ್ಡ್ ಅಂಪೈರ್ ಸಹ ನಾಟೌಟ್ ಅನ್ನು ಔಟ್ ಎಂದು ತೀರ್ಪು ನೀಡಿರುವುದಕ್ಕೆ ಟೀಂ ಇಂಡಿಯಾದ...
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಅಂಪೈರ್ ಗಳು ಯಡವಟ್ಟು ಮಾಡುವುದು ಸಾಮಾನ್ಯವಾಗಿತ್ತು. ಆದರೆ ಥರ್ಡ್ ಅಂಪೈರ್ ಸಹ ನಾಟೌಟ್ ಅನ್ನು ಔಟ್ ಎಂದು ತೀರ್ಪು ನೀಡಿರುವುದಕ್ಕೆ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹಣೆ ಚಚ್ಚಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಔಟ್ ತೀರ್ಪು ಕುರಿತಂತೆ ತಮ್ಮ ಟ್ವೀಟ್ ನಲ್ಲಿ ಐಸಿಸಿ ಕಾಲೆಳೆದಿದ್ದಾರೆ. ಬ್ಯಾಟ್ ಮತ್ತು ಚೆಂಡು ಮಧ್ಯೆ ಇರುವ ಅಂತರವನ್ನು ಫೋಟೋ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಹಣೆ ಚಚ್ಚಿಕೊಂಡಿರುವ ಹಾಗೂ ಕಣ್ಣುಗಳ ಅಮೋಜಿಯನ್ನು ಹಾಕಿ ಅಸಮಾಧಾನ ಹೊರಹಾಕಿದ್ದಾರೆ.
ವಿಂಡೀಸ್ ತಂಡದ ಬೌಲರ್ ಕೆಮರ್ ರೂಚ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಥರ್ಡ್ ಅಂಪೈರ್ ಯಡವಟ್ಟು ತೀರ್ಪಿನಿಂದ ಔಟಾಗಿದ್ದರು. ಮೊದಲಿಗೆ ರೂಚ್ ಅಪೀಲ್ ಮಾಡಿದಾಗ ಮೈದಾನದ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. ಇದಕ್ಕೆ ವಿಂಡೀಸ್ ನಾಯಕ ಡಿಆರ್ಎಸ್ ಗೆ ಮೊರೆ ಹೋಗಿದ್ದರು. ಈ ವೇಳೆ ದೃಶ್ಯಗಳನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಅಲ್ಟ್ರಾ ಎಡ್ಜ್ ನಲ್ಲಿ ಚೆಂಡು ಪ್ಯಾಡ್ ಗೆ ತಗಲಿದ್ದನ್ನು ಗಮನಿಸಿ ಮೂರನೇ ಅಂಪೈರ್ ಔಟ್ ತೀರ್ಪು ನೀಡುವಂತೆ ಸೂಚಿಸಿದ್ದರು.
ಥರ್ಡ್ ಅಂಪೈರ್ ಈ ತೀರ್ಪು ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com