ವಿಡಿಯೋ: ಐಸಿಸಿ ಎಚ್ಚರಿಕೆ ನಿರ್ಲಕ್ಷಿಸಿದ ಹ್ಯಾಂಡ್ಸ್ ಕಾಂಬ್ ಗೆ ಧೋನಿಯಿಂದ ತಕ್ಕ ಶಾಸ್ತಿ!

ವಿಕೆಟ್ ಹಿಂದೆ ಧೋನಿ ಇರುವಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ ಎಂಬ ಐಸಿಸಿಯ ಎಚ್ಚರಿಕೆಯ ಹೊರತಾಗಿಯೂ ಕ್ರೀಸ್ ಬಿಡುವ ಧೈರ್ಯ ಮಾಡಿದ್ದ ಆಸಿಸ್ ಬ್ಯಾಟ್ಸಮನ್ ಗೆ ಧೋನಿ ಪೆವಿಲಿಯನ್ ದಾರಿ ತೋರಿಸಿದ್ದಾರೆ.
ಧೋನಿ ಸ್ಟಂಪ್ ಔಟ್
ಧೋನಿ ಸ್ಟಂಪ್ ಔಟ್
ಹೈದರಾಬಾದ್: ವಿಕೆಟ್ ಹಿಂದೆ ಧೋನಿ ಇರುವಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ ಎಂಬ ಐಸಿಸಿಯ ಎಚ್ಚರಿಕೆಯ ಹೊರತಾಗಿಯೂ ಕ್ರೀಸ್ ಬಿಡುವ ಧೈರ್ಯ ಮಾಡಿದ್ದ ಆಸಿಸ್ ಬ್ಯಾಟ್ಸಮನ್ ಗೆ ಧೋನಿ ಪೆವಿಲಿಯನ್ ದಾರಿ ತೋರಿಸಿದ್ದಾರೆ.
ಈ ಹಿಂದೆ ಐಸಿಸಿ, ಎಂ ಎಸ್ ಧೋನಿ ವಿಕೆಟ್ ಹಿಂದೆ ಕೀಪಿಂಗ್ ಮಾಡುತ್ತಿರುವಾಗ ಬ್ಯಾಟ್ಸ್ ಮನ್ ಗಳು ಕ್ರೀಸ್​ ಬಿಟ್ಟು ಕದಲ ಬೇಡಿ ಎಂದು ಎಚ್ಚರಿಕೆ ನೀಡಿತ್ತು. ಆದರೆ, ಈ ಮಾತನ್ನು ಪಾಲಿಸದ ಆಸಿಸ್ ಬ್ಯಾಟ್ಸಮನ್ ಪೀಟರ್ ಹ್ಯಾಂಡ್ಸ್ ಕಾಂಬ್​​ ಬೆಲೆ ತೆತ್ತಿದ್ದಾರೆ. 
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಬೇಗನೆ ತನ್ನ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತು. ಅಂತೆಯೆ 4ನೇ ವಿಕೆಟ್ ಗೆ ಕ್ರೀಸ್ ಗೆ ಬಂದ ಪೀಟರ್ ಹ್ಯಾಂಡ್ಸ್ ಕಾಂಬ್​​ ಐಸಿಸಿ ಹೇಳಿದ ಮಾತನ್ನು ಗಾಳಿಗೆ ತೂರಿ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು. ಪಂದ್ಯದ 30ನೇ ಓವರ್​ ಬೌಲಿಂಗ್ ಮಾಡುತ್ತಿದ್ದ ಕುಲ್ದೀಪ್ ಯಾದವ್ ರ ಕೊನೆಯ ಎಸೆತದಲ್ಲಿ ಹ್ಯಾಂಡ್ಸ್ ಕಾಂಬ್​ ಕ್ರೀಸ್​ ಬಿಟ್ಟು ಮುಂದೆ ಬಂದು ಸಿಕ್ಸ್​ ಸಿಡಿಸಲು ಯತ್ನಿಸಿದರು. ಆದರೆ, ಚೆಂಡು ಬ್ಯಾಟ್​ ಗೆ ತಾಗದೆ ನೇರವಾಗಿ ಧೋನಿ ಕೈ ಸೇರಿತು. ತಕ್ಷಣವೆ ಧೋನಿ ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿ ಹ್ಯಾಂಟ್ಸ್ ​ಕಾಂಬ್​ ರನ್ನು ಪೆವಿಲಿಯನ್​ಗೆ ಅಟ್ಟಿದರು.
ಆ ಮೂಲಕ ಧೋನಿ ಈ ಹಿಂದೆ ಐಸಿಸಿ ನೀಡಿದ್ದ ಎಚ್ಚರಿಕೆಯನ್ನು ನಿಜ ಮಾಡಿದ್ದಾರೆ.
ಇನ್ನು ಹೈದರಾಬಾದ್​ನಲ್ಲಿ ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಎಂಎಸ್ ಧೋನಿ ಹಾಗೂ ಕೇದರ್ ಜಾಧವ್​​ರ ಶತಕದ ಜೊತೆಯಾಟದ ನೆರವಿನಿಂದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಪಡೆ 1-0 ಮುನ್ನಡೆ ಸಾಧಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com