ಮಹಿಳಾ ಮೊದಲ ಟಿ-20 ಪಂದ್ಯ: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 41 ರನ್‌ಗಳ ಸೋಲು

ಭಾರತದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್ ತಂಡ 41 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುವಾಹತಿ: ಭಾರತದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್ ತಂಡ 41 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂದು ಗುವಾಹತಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತೀಯ ವನಿತೆಯರ ತಂಡವನ್ನು 41 ರನ್ ಗಳ ಅಂತರದಲ್ಲಿ ಮಣಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 160 ರನ್‌ ದಾಖಲಿಸಿತು. ಇದರೊಂದಿಗೆ ಭಾರತಕ್ಕೆ 161 ರನ್‌ ಗುರಿ ನೀಡಿತು. ಬಳಿಕ ಗುರಿ ಬೆನ್ನತ್ತಿದ ಭಾರತ, ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 119 ರನ್‌ಗಳಿಗೆ ಶಕ್ತವಾಯಿತು. ಇದರೊಂದಿಗೆ 41 ರನ್‌ಗಳಿಂದ ಸ್ಮೃತಿ ಮಂದಾನ ಪಡೆ ಸೋಲು ಒಪ್ಪಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ  ಟಾಮಿ ಬಿಮೌಂಟ್‌ (62 ರನ್‌, 57 ಎಸೆತಗಳು) ಆಕರ್ಷಕ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. 161 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಭಾರತೀಯ ವನಿತೆಯರ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 119 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಇಂಗ್ಲೆಂಡ್ ವನಿತೆಯರ ಎದುರು 41 ರನ್ ಗಳ ಅಂತರದಲ್ಲಿ ಸೋಲು ಕಂಡಿತು. 
ಭಾರತದ ಪರ ದೀಪ್ತಿ ಶರ್ಮಾ(22* ರನ್‌) ಹಾಗೂ ಶಿಖಾ ಪಾಂಡೆ (23* ರನ್‌) ಅವರನ್ನು ಬಿಟ್ಟರೆ ಇನ್ನುಳಿದ ಎಲ್ಲ ಆಟಗಾರ್ತಿಯರು 20ರ ಗಡಿ ದಾಟಲೇ ಇಲ್ಲ. ಇಂಗ್ಲೆಂಡ್‌ ಬೌಲರ್‌ಗಳ ದಾಳಿಗೆ ಎದುರಿಸಲಾಗದೇ ಹರ್ಲೀನ್‌ ಡಿಯೋಲ್‌ (8 ರನ್‌), ಸ್ಮೃತಿ ಮಂದಾನ (2 ರನ್‌), ಜೆಮಿಮಾ ರೋಡ್ರಿಗಸ್‌(2 ರನ್‌), ಮಿಥಾಲಿ ರಾಜ್‌ (7 ರನ್‌) ಬಹುಬೇಗ ನೆಲಕಚ್ಚಿದರು. ಇಂಗ್ಲೆಂಡ್‌ ಪರ ಕತೇರಿನ್‌ ಬ್ರಂಟ್‌ ಹಾಗೂ ಲಿನ್ಸಿ ಸ್ಮಿತ್‌ ತಲಾ ಎರಡು ವಿಕೆಟ್‌ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ಗೆ ಆರಂಭಿಕರಾದ ಡೆನಿಲ್ ವ್ಯಾಟ್‌ ಹಾಗೂ ಟಾಮಿ ಬಿಮೌಂಟ್‌ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 89 ರನ್‌ ದಾಖಲಿಸುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. 35 ರನ್‌ ಗಳಿಸಿ ಆಡುತ್ತಿದ್ದ ಡೆನಿಲ್‌ ವ್ಯಾಟ್‌ ಅವರು ಶಿಖಾ ಪಾಂಡೆಗೆ ವಿಕೆಟ್‌ ಒಪ್ಪಿಸಿದರು.
ಅದ್ಭುತ ಬ್ಯಾಟಿಂಗ್ ಮುಂದುವರಿಸಿದ ಟಾಮಿ ಬಿಮೌಂಟ್‌  ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದರು. ಎದುರಿಸಿದ 57 ಎಸೆತಗಳಲ್ಲಿ ಒಂಬತ್ತು ಬೌಂಡರಿಯೊಂದಿಗೆ 62 ರನ್ ಗಳಿಸಿ ಅರ್ಧ ಶತಕ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು. ನಾಯಕಿ ಹೇದರ್‌ ನೈಟ್‌  ಭರವಸೆಯನ್ನು ಹುಸಿ ಮಾಡಲಿಲ್ಲ. ಅವರು ಕೇವಲ 20 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ ಒಟ್ಟು 40 ರನ್‌ ಗಳಿಸಿ ತಂಡದ ಮೊತ್ತದ ಏರಿಕೆಗೆ ಉಪಯುಕ್ತ ಕಾಣಿಕೆ ನೀಡಿದರು.
ರಾಧ ಯಾದವ್‌ ನಾಲ್ಕು ಓವರ್‌ಗಳಲ್ಲಿ 33 ರನ್‌ ನೀಡಿ ಎರಡು ವಿಕೆಟ್‌ ಉರುಳಿಸಿದರು. ಭಾರತದ ಪರ ಪೂನಮ್‌ ಯಾದವ್‌ ನಾಲ್ಕು ಓವರ್‌ಗಳಲ್ಲಿ  ಕೇವಲ 18 ರನ್‌ ನೀಡಿ ರನ್‌ ಕಡಿವಾಣ ಹಾಕಿದರು. ಇನ್ನುಳಿದ ಎಲ್ಲ ಬೌಲರ್‌ಗಳು ಇಂಗ್ಲೆಂಡ್‌ ಎದುರು ದುಬಾರಿಯಾದರು. ಇದರೊಂದಿಗೆ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಪಡೆಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com