ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ ದಾಖಲೆ ಮುರಿದ ಸ್ಮೃತಿ ಮಂದಾನ

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ಸ್ಮೃತಿ ಮಂದಾನ ದಾಖಲೆ ಬರೆದಿದ್ದಾರೆ.
ಸುರೇಶ್ ರೈನಾ-ಸ್ಮೃತಿ ಮಂದಾನ
ಸುರೇಶ್ ರೈನಾ-ಸ್ಮೃತಿ ಮಂದಾನ
ಗುವಾಹಟಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡದ ಸ್ಮೃತಿ ಮಂದಾನ ದಾಖಲೆ ಬರೆದಿದ್ದಾರೆ.
ಟಿ20 ಮಾದರಿಯಲ್ಲಿ ತಂಡವನ್ನು ಮುನ್ನಡೆಸಿದ ಟೀಂ ಇಂಡಿಯಾದ ಅತ್ಯಂತ ಕಿರಿಯ ನಾಯಕಿ ಎಂಬ ಖ್ಯಾತಿಗೆ ಇದೀಗ ಸ್ಮೃತಿ ಮಂದಾನ ಭಾಜನರಾಗಿದ್ದಾರೆ.
ಸ್ಮೃತಿ ಮಂದಾನಗಿಂತ ಮೊದಲು ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ರೈನಾ 23 ವರ್ಷ 197ನೇ ದಿನ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಮೂಲಕ ಭಾರತ ಟಿ20 ತಂಡದ ನಾಯಕತ್ವ ವಹಿಸಿದ ಕಿರಿಯ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದರು. 
ಗುವಾಹಟಿಯಲ್ಲಿ ನಡೆದ ಮೊದಲ ಟಿ20ಯಲ್ಲಿ ಮಂದಾನ ನಾಯಕತ್ವ ವಹಿಸಿಕೊಳ್ಳುವ ಮೂಲಕ 22 ವರ್ಷ 229ನೇ ದಿನ ನಾಯಕತ್ವ ವಹಿಸಿದ್ದಾರೆ. ಈ ಮೂಲಕ ರೈನಾ ದಾಖಲೆ ಮುರಿದಿದ್ದಾರೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ 41 ರನ್ ಗಳಿಂದ ಸೋಲು ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com