ಒಂದೇ ಶತಕ, 2 ಅಪರೂಪದ 'ವಿರಾಟ್' ದಾಖಲೆಗಳು!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಭಾರತ-ಆಸ್ಟ್ರೇಲಿಯಾ 2 ನೆ ಏಕದಿನ ಪಂದ್ಯದಲ್ಲಿ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ.

Published: 05th March 2019 12:00 PM  |   Last Updated: 05th March 2019 10:43 AM   |  A+A-


Virat Kohli

ವಿರಾಟ್ ಕೊಹ್ಲಿ

Posted By : SBV SBV
Source : Online Desk
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಭಾರತ-ಆಸ್ಟ್ರೇಲಿಯಾ 2 ನೆ ಏಕದಿನ ಪಂದ್ಯದಲ್ಲಿ ಅಪರೂಪದ ದಾಖಲೆ ನಿರ್ಮಾಣ ಮಾಡಿದ್ದಾರೆ. 

ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ 40ನೇ ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ, ಈ ಮೂಲಕ ನಾಯಕನಾಗಿದ್ದುಕೊಂಡು ಅತಿ ವೇಗವಾಗಿ 9000 ರನ್ ಗಳಿಸಿರುವ ಕ್ರಿಕೆಟಿಗನಾ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 

ತಂಡದ ನಾಯಕರಾಗಿದ್ದು ವೇಗವಾಗಿ 9000 ರನ್ ಗಳಿಸಿರುವ 6 ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಿದ್ದು, ಕೇವಲ 159 ಇನ್ನಿಂಗ್ಸ್ ನಲ್ಲಿ ಈ ಮಹತ್ತರ ಸಾಧನೆ ಮಾಡಿದ್ದಾರೆ. 

159 ಇನ್ನಿಂಗ್ಸ್ ನಲ್ಲಿ7000 ರನ್ ಗಳಿಸುವುದಕ್ಕೂ ಈ ವರೆಗೂ ಯಾವುದೇ ತಂಡದ ನಾಯಕನಿಗೆ ಸಾಧ್ಯವಾಗಿಲ್ಲ. ಕ್ರಿಕೆಟ್ ಲೆಜೆಂಡ್ ವೆಸ್ಟ್ ಇಂಡೀಸ್ ಬ್ರೇನ್ ಲಾರ 164 ರನ್ ಇನ್ನಿಂಗ್ಸ್ ಗಳಲ್ಲಿ 7000 ರನ್ ಪೂರೈಸಿದ್ದು, ಕೊಹ್ಲಿ ಸನಿಹದಲ್ಲಿದ್ದಾರೆ. 

ಈ ಮೂಲಕ ವಿರಾಟ್ ಕೊಹ್ಲಿ 4000, 5000, 6000, 7000, 8000, 9000 ರನ್ ಗಳನ್ನು ಅತಿ ವೇಗವಾಗಿ ಗಳಿಸಿರುವ ಕ್ರಿಕೆಟಿಗನಾಗಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp