ಐಷಾರಾಮಿ ಹಮ್ಮರ್ ಕಾರಿನಲ್ಲಿ ಪಂತ್, ಜಾದವ್ ಜೊತೆ ಎಂಎಸ್ ಧೋನಿ ರೈಡ್, ವಿಡಿಯೋ ವೈರಲ್!

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯ ರಾಂಚಿಯಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ತವರಿಗೆ ಆಗಮಿಸಿದ ಎಂಎಸ್ ಧೋನಿ ತಮ್ಮ ಹಮ್ಮರ್ ಕಾರಿನಲ್ಲಿ ರಿಷಬ್ ಪಂತ್ ಹಾಗೂ ಕೇದಾರ್ ಜಾದವ್...

Published: 07th March 2019 12:00 PM  |   Last Updated: 07th March 2019 07:22 AM   |  A+A-


MS Dhoni

ಎಂಎಸ್ ಧೋನಿ

Posted By : VS VS
Source : Online Desk
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯ ರಾಂಚಿಯಲ್ಲಿ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ತವರಿಗೆ ಆಗಮಿಸಿದ ಎಂಎಸ್ ಧೋನಿ ತಮ್ಮ ಹಮ್ಮರ್ ಕಾರಿನಲ್ಲಿ ರಿಷಬ್ ಪಂತ್ ಹಾಗೂ ಜಾದವ್ ಜೊತೆ ಸೂಪರ್ ರೈಡ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇನ್ನು ತಮ್ಮ ಹೀರೋ ಬಗ್ಗೆ ಸ್ಥಳೀಯರಲ್ಲಿ ಅಭಿಮಾನ ಹೆಚ್ಚಾಗಿದ್ದು ಧೋನಿ ಹಮ್ಮರ್ ಕಾರಿನಲ್ಲಿ ರೈಡ್ ಹೋಗುವಾಗ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.

ಐದು ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇನ್ನು ಮಾರ್ಚ್ 8ರಂದು ರಾಂಚಿಯಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿ ಭಾರತವಿದ್ದರೆ ಅತ್ತ ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆದ್ದು ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಯೋಜನೆ ಹಾಕಿಕೊಂಡಿದೆ.
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp