ಧೋನಿ ತವರಿನಲ್ಲಿ ಏಕದಿನ ಸರಣಿ ಗೆಲುವಿನ ಕನಸು

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ ತಂಡ, ಶುಕ್ರವಾರ ಸರಣಿಯ ಮೂರನೇ ಪಂದ್ಯದಲ್ಲಿಯೂ ಪ್ರವಾಸಿ ತಂಡವನ್ನು ಕಾಡಲು ಸಜ್ಜಾಗಿದೆ.

Published: 07th March 2019 12:00 PM  |   Last Updated: 07th March 2019 03:19 AM   |  A+A-


MS Dhoni, Virat Kohli

ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ

Posted By : ABN
Source : UNI
ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ ತಂಡ, ಶುಕ್ರವಾರ ಸರಣಿಯ ಮೂರನೇ ಪಂದ್ಯದಲ್ಲಿಯೂ  ಪ್ರವಾಸಿ ತಂಡವನ್ನು  ಕಾಡಲು ಸಜ್ಜಾಗಿದೆ. ಈಗಾಗಲೇ ಎರಡೂ ಏಕದಿನ ಪಂದ್ಯ ಗೆದ್ದಿರುವ ವಿರಾಟ್ ಪಡೆ, ಮೂರನೇ ಪಂದ್ಯ ಗೆದ್ದು ಸರಣಿ ಗೆಲುವು ಸಾಧಿಸುವ ಯೋಜನೆ ರೂಪಿಸಿಕೊಂಡಿದೆ.

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರಿನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಕುತೂಹಲ ಮೂಡಿಸಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿದ್ದು, ವಿರಾಟ್ ಪಡೆ ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡುವ ಪ್ಲಾನ್ ಹಾಕಿಕೊಂಡಿದೆ.

ಆರಂಭಿಕ ಚಿಂತೆ
ಟೀಮ್ ಇಂಡಿಯಾ ಎರಡೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೂ, ಆರಂಭಿಕ ಆಟಗಾರರು ಲಯಕ್ಕೆ ಮರಳದೇ ಇರುವುದು ತಂಡಕ್ಕೆ ತಲೆನೋವಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಸೊನ್ನೆ ಸುತ್ತಿದ್ದರೆ, ಶಿಖರ್ ಧವನ್ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಇವರಿಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಿ ರಾಹುಲ್ ಗೆ ಅವಕಾಶ ನೀಡಿದರೆ ಉತ್ತಮ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕ ಉತ್ತಮವಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ, ಭರವಸೆ ಮೂಡಿಸಿದ್ದಾರೆ. ಅಂಬಟಿ ರಾಯುಡು ಸಿಕ್ಕ ಅವಕಾಶವನ್ನು ಹಾಳು ಮಾಡಿಕೊಂಡಿದ್ದಾರೆ. ಕೇದಾರ್ ಜಾದವ್ ಹಾಗೂ ಮಹೇಂದ್ರ ಸಿಂಗ್ ಧೋನಿ ಸಮಯೋಚಿತ ಆಟ ಆಡುವ ಸೂಚನೆ ನೀಡಿದ್ದಾರೆ. ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ ಹಾಗೂ ವಿಜಯ್ ಶಂಕರ್ ಇಬ್ಬರಿಗೂ ತಂಡದಲ್ಲಿ ಸ್ಥಾನ ಲಭಿಸಬಹುದು.

ಬೌಲಿಂಗ್ ವಿಭಾಗವನ್ನು ಯಾರ್ಕರ್ ಸ್ಪೆಷಲಿಸ್ಟ್‍ ಜಸ್ಪ್ರಿತ್ ಬೂಮ್ರಾ ಹಾಗೂ ಮೊಹಮ್ಮದ್ ಶಮಿ ಮುನ್ನಡೆಸಲಿದ್ದಾರೆ. ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಉರುಳಿಸಿದ್ದ ಕುಲ್ ದೀಪ್ ಯಾದವ್ ಹಾಗೂ ಜಡೇಜಾ ಸ್ಪಿನ್ ಮೋಡಿ ನಡೆಸಬೇಕಿದೆ. ಆಸ್ಟ್ರೇಲಿಯಾ ತಂಡ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ.

ತಂಡದ ಸ್ಟಾರ್ ಆಟಗಾರರು ಲಯಕ್ಕೆ ಮರಳಿದ್ದು ತಂಡದ ಚಿಂತೆ ದೂರ ಮಾಡಿದೆ. ಆರೋನ್ ಫಿಂಚ್ ಹಾಗೂ ಮಾರ್ಕುಸ್ ಸ್ಟೋಯಿನಿಸ್ ಎರಡನೇ ಪಂದ್ಯದಲ್ಲಿ ಸಮಯೋಚಿತ ಆಟವಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪ್ಯಾಟ್ ಕಮಿನ್ಸ್ ವಿಕೆಟ್ ಬೇಟೆ ನಡೆಸಿ ಅಬ್ಬರಿಸಿದ್ದು, ಮೂರನೇ ಪಂದ್ಯದಲ್ಲೂ ಭಾರತಕ್ಕೆ ಕಾಡುವ ಯೋಜನೆ ಹಾಕಿಕೊಂಡಿದ್ದಾರೆ. ಇನ್ನು ನಾಥನ್ ಕೌಲ್ಟರ್ ನೈಲ್, ಸ್ಪಿನ್ ಬೌಲರ್ ಆಡಂ ಝಂಪಾ ಬಿಗುವಿನ ದಾಳಿ ನಡೆಸಬೇಕಿದೆ.

ಸಂಭಾವ್ಯ ತಂಡ:-
ಭಾರತ: ರೋಹಿತ್ ಶರ್ಮಾ,  ಕೆ.ಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಎಂ.ಎಸ್ ಧೋನಿ, ಕೇದಾರ ಜಾದವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್‌ ಬೂಮ್ರಾ.

ಆಸ್ಟ್ರೇಲಿಯಾ: ಅರೋನ್ ಫಿಂಚ್‌, ಉಸ್ಮಾನ್‌ ಖವಾಜ, ಮಾರ್ಕುಸ್‌ ಸ್ಟೋಯಿನಿಸ್‌, ಪೀಟರ್‌ ಹ್ಯಾಂಡ್ಸ್‌ಕೊಂಬ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಶಾನ್‌ ಮಾರ್ಷ್‌, ಅಲೆಕ್ಸ್ ಕ್ಯಾರಿ, ನಥಾನ್ ಕೌಲ್ಟರ್-ನೈಲ್, ಪ್ಯಾಟ್ ಕಮಿನ್ಸ್, ಆ್ಯಡಂ ಝಂಪಾ, ಜೇಸನ್ ಬೆಹ್ರೆನ್‌ಡ್ರಾಫ್‌

ಸಮಯ: ನಾಳೆ ಮಧ್ಯಾಹ್ನ 01:30

Stay up to date on all the latest ಕ್ರಿಕೆಟ್ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp