
ಉಮರ್ ಅಕ್ಮಲ್
Source : Online Desk
ಕರಾಚಿ: ಯುಎಇಯಲ್ಲಿ 26 ಪಂದ್ಯಗಳನ್ನು ಮುಕ್ತಾಯಗೊಳಿಸಿರುವ ಪಾಕಿಸ್ತಾನ ಸೂಪರ್ ಲೀಗ್ ಪಾಕಿಸ್ತಾನದಲ್ಲಿ ಮುಂದಿನ 8 ಪಂದ್ಯಗಳು ನಡೆಯಲಿವೆ.
ಪಾಕಿಸ್ತಾನ ಸೂಪರ್ ಲೀಗ್ ಬಗ್ಗೆ ಮಾತನಾಡಲು ಹೋಗಿ ಪಾಕಿಸ್ತಾನ ಕ್ರಿಕೆಟಿಗ ಉಮರ್ ಅಕ್ಮಲ್ ಯಡವಟ್ಟು ಮಾಡಿಕೊಂಡಿದ್ದು, ಪಿಎಸ್ಎಲ್ ಬದಲು ಐಪಿಎಲ್ ಎಂದು ಹೇಳಿದ್ದಾರೆ.
ಪಿಎಸ್ಎಲ್ ನ ಕ್ವೆಟ್ಟಾ ಗ್ಲೇಡಿಯೇಟರ್ಸ್ ನ ಭಾಗವಾಗಿರುವ ಉಮರ್ ಅಕ್ಮಲ್ ಪಿಎಸ್ಎಲ್ ನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರೊಮೋಟ್ ಮಾಡುವಾಗ ಪಿಎಸ್ಎಲ್ ಎಂದು ಹೇಳುವ ಬದಲು ಇಂಡಿಯನ್ ಪ್ರೀಮಿಯರ್ ಲೀಗ್ ಎಂದು ತಪ್ಪಾಗಿ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.
Subhan Allah ... pic.twitter.com/kjHzIz4yxO
— Taimoor Zaman (@taimoor_ze) March 9, 2019
ಕ್ವೆಟ್ಟಾ ತಂಡ ತವರು ನೆಲ ಕರಾಚಿಯಲ್ಲಿದ್ದು ಹೆಚ್ಚಿನ ಬೆಂಬಲ ಸಿಗುತ್ತಿದೆ. ಹೆಚ್ಚೆಚ್ಚು ಜನರು ಹೀಗೆ ಬೆಂಬಲಿಸಿದರೆ ಮುಂದಿನ ಐಪಿಎಲ್... ಕ್ಷಮಿಸಿ ಪಿಎಸ್ಎಲ್ ನ್ನು ಇಲ್ಲೇ ಆಡುತ್ತೇವೆ ಎಂದು ಉಮರ್ ಅಕ್ಮಲ್ ಹೇಳಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now