
ಟೀಂ ಇಂಡಿಯಾ
Source : Online Desk
ಹೈದರಾಬಾದ್: ಹುತಾತ್ಮ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಸೇನಾ ಕ್ಯಾಪ್ ಧರಿಸಿದ್ದಕ್ಕೆ ಪಾಕಿಸ್ತಾನ ಕ್ಯಾತೆ ತೆಗೆದ್ದಿದ್ದು ಇದೀಗ ಐಸಿಸಿ ಮುಂದೆ ಮುಖಭಂಗ ಅನುಭವಿಸಿದೆ.
ಮಾರ್ಚ್ 8ರಂದು ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಸೇನಾ ಕ್ಯಾಪ್ ಧರಿಸಿ ಟೀಂ ಇಂಡಿಯಾ ಮೈದಾನಕ್ಕಿಳಿದಿದ್ದು ಇದಕ್ಕೆ ಕ್ಯಾತೆ ತೆಗೆದಿದ್ದ ಪಾಕ್ ಐಸಿಸಿಗೆ ದೂರು ನೀಡಿತ್ತು. ಅಲ್ಲದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ ಐಸಿಸಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೇನಾ ಕ್ಯಾಪ್ ಧರಿಸುವ ಸಲುವಾಗಿ ಅನುಮತಿ ಪಡೆದಿತ್ತು ಎಂದಿದೆ.
ಬಿಸಿಸಿಐ ಆರ್ಮಿ ಕ್ಯಾಪ್ ಧರಿಸಿ ಆಡುವ ಬಗ್ಗೆ ಹಾಗೂ ಪಂದ್ಯದ ಸಂಭಾವನೆ ಸೈನಿಕರ ನಿಧಿಗೆ ನೀಡುವ ಕುರಿತು ಐಸಿಸಿ ಸಿಇಒ ಡೇವ್ ರಿಚರ್ಡ್ ಸನ್ ಬಳಿ ಅನುಮತಿ ಪಡೆದಿತ್ತು ಎಂದು ಐಸಿಸಿ ಸ್ಪಷ್ಟನೆ ನೀಡಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now