ರಿಷಬ್ ಪಂತ್ ಎಡವಟ್ಟುಗಳಿಂದ ಆಕ್ರೋಶಗೊಂಡ ಅಭಿಮಾನಿಗಳು 'ಧೋನಿ ಧೋನಿ' ಎಂದು ಕೂಗಿದ್ದೇಕೆ?

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ವಯಸ್ಸಾಯಿತು ಅವರಿಗೆ ರೆಸ್ಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ನಿನ್ನೆಯ ಪಂದ್ಯದಲ್ಲಿ...
ರಿಷಬ್ ಪಂತ್-ವಿರಾಟ್ ಕೊಹ್ಲಿ
ರಿಷಬ್ ಪಂತ್-ವಿರಾಟ್ ಕೊಹ್ಲಿ
ಮೊಹಾಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ವಯಸ್ಸಾಯಿತು ಅವರಿಗೆ ರೆಸ್ಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ನಿನ್ನೆಯ ಪಂದ್ಯದಲ್ಲಿ ಧೋನಿಯ ಅನುಪಸ್ಥಿತಿ ತಂಡವನ್ನು ಹೆಚ್ಚು ಕಾಡಿತ್ತು. ಧೋನಿಗೆ ನಾನೇ ಕಾಂಪಿಟೇಟರ್ ಎಂದು ಹೇಳಿಕೊಳ್ಳುತ್ತಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮಾಡಿದ ಎಡವಟ್ಟುಗಳು ಭಾರತ 358 ರನ್ ಬೃಹತ್ ಮೊತ್ತ ಕಲೆಹಾಕಿದ್ದರುೂ ಸೋಲಿಗೆ ಕಾರಣವಾಗಿದೆ.
ಮೊಹಾಲಿ ಅಂಗಳದಲ್ಲಿ ಟರ್ನರ್ ಸ್ಫೋಟಕ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾಗೆ 4 ವಿಕೆಟ್ ಗಳಿಂದ ಜಯ ತಂದುಕೊಟ್ಟಿತು. ಆದರೆ ಟರ್ನರ್ ಗೆ ಟೀಂ ಇಂಡಿಯಾ ನೀಡಿದ ಜೀವಧಾನಗಳು ಆತ ಸ್ಫೋಟಕ ಬ್ಯಾಟಿಂಗ್ ಗೆ ಕಾರಣವಾಯಿತು. ಯಜುವೇಂದ್ರ ಚಹಾಲ್ ಬೌಲಿಂಗ್ ನಲ್ಲಿ ರಿಷಬ್ ಪಂತ್ ಒಟ್ಟು ಮೂರು ಬಾರಿ ಸ್ಟಂಪ್ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡರು. 
ಇದರ ಮಧ್ಯೆ ತಾನು ಧೋನಿಗಿಂತ ಕಡಿಮೆ ಇಲ್ಲ ಅಂತ ಸಾಬೀತು ಪಡಿಸಲು ಹೋಗಿ ಎಡವಟ್ಟು ಮಾಡಿದ್ದಾರೆ. ಧೋನಿಯಂತೆ ಹಿಮ್ಮುಖವಾಗಿ ಸ್ಟಂಪ್ ಮಾಡಲು ಹೋಗಿ ಒಂದು ಅವಕಾಶವನ್ನು ಕಳೆದುಕೊಂಡರು. ಪದೇ ಪದೇ ಸ್ಟಂಪ್ ಔಟ್ ಹಾಗೂ ಕ್ಯಾಚ್ ಅನ್ನು ಕೈಚೆಲ್ಲಿದ್ದರಿಂದ ಕೋಪಗೊಂಡ ವಿರಾಟ್ ಕೊಹ್ಲಿ ಮೈದಾನದಲ್ಲೇ ಪಂತ್ ಏನು ಮಾಡುತ್ತಿದ್ದೀಯ ಎಂದು ಪ್ರಶ್ನಿಸುವ ರೀತಿಯಲ್ಲಿ ತಮ್ಮ ಕೈಯನ್ನು ಎತ್ತಿ ತೋರಿಸಿ ಅಸಮಾಧಾನವನ್ನು ಹೊರಹಾಕಿದರು.
ಇನ್ನು ಪಂತ್ ಎಡವಟ್ಟುಗಳನ್ನು ಬೇಸರಗೊಂಡ ಅಭಿಮಾನಿಗಳು ಸಹ ಮೈದಾನದಲ್ಲೇ ಧೋನಿ ಧೋನಿ ಎಂದು ಘೋಷಣೆ ಕೂಗುವ ಮೂಲಕ ರಿಷಭ್ ಪಂತ್ ರನ್ನು ಪ್ರತ್ಯಕ್ಷವಾಗಿಯೇ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com