ದೇಶಿ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ಅದ್ಭುತ ಕ್ಯಾಚ್, ವಿಡಿಯೋ ವೈರಲ್!

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ಜಾಸ್ತಿ ಇದೆ. ಒಂದೊಂದು ಕ್ಯಾಚ್ ಗಳು ರೋಚಕ. ಅದೇ ರೀತಿ ಇದೀಗ ದೇಶಿ ಕ್ರಿಕೆಟ್ ನಲ್ಲೂ ಒಂದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ವೈರಲ್ ಆಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ಜಾಸ್ತಿ ಇದೆ. ಒಂದೊಂದು ಕ್ಯಾಚ್ ಗಳು ರೋಚಕ. ಅದೇ ರೀತಿ ಇದೀಗ ದೇಶಿ ಕ್ರಿಕೆಟ್ ನಲ್ಲೂ ಒಂದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ವೈರಲ್ ಆಗಿದೆ.
ರೈಲ್ವೆಸ್ ಮತ್ತು ಮಹಾರಾಷ್ಟ್ರ ನಡುವೆ ನಡೆದ ಪಂದ್ಯದ ವೇಳೆ ರೈಲ್ವೆಸ್ ತಂಡದ ಆಟಗಾರ ಮಂಜಿತ್ ಚೆಂಡನ್ನು ಸಿಕ್ಸರ್ ಗೆ ಬಾರಿಸಿದರು.  ಈ ವೇಳೆ ಲಾಂಗ್ ಆನ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಹಾರಾಷ್ಟ್ರದ ಆಟಗಾರ ಗಾಯಕ್ವಾಡ್ ಓಡಿ ಬಂದು ಕ್ಯಾಚ್ ಹಿಡಿದರು. ಆದರೆ ತಾವು ಇನ್ನೇನು ಬೌಂಡರಿ ಗೆರೆಯೊಳಗೆ ಕಾಲಿಡುತ್ತೇವೆ ಎನ್ನುವಷ್ಟರಲ್ಲಿ ಚೆಂಡನ್ನು ಸಹ ಆಟಗಾರ ಕಡೆಗೆ ಎಸೆದರು. ಈ ವೇಳೆ ಅಲ್ಲೆ ಇದ್ದ ಹಿಮ್ಗನೇಕರ್ ಕ್ಯಾಚ್ ಅನ್ನು ಹಿಡಿದರು.
ಒಟ್ಟಿನಲ್ಲಿ ದೇಶಿ ಕ್ರಿಕೆಟ್ ನಲ್ಲಿ ಇಂತಹ ಅದ್ಭುತ ಕ್ಯಾಚ್ ಹಿಡಿದಿರುವುದು ಸಾಕಷ್ಟು ಗಮನಾರ್ಹವಾಗಿದೆ. ಈ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿದೆ. ಸೈಯದ್ ಮುಷ್ತಕ್ ಅಲಿ ಟ್ರೋಫಿಯಾ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ತಂಡಗಳು ಸೆಣೆಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com