ಕೊಹ್ಲಿ ದಾಖಲೆಗೆ ಸ್ವಂತ ನೆಲದಲ್ಲೇ ಬಿತ್ತು ಬ್ರೇಕ್: ವಿರಾಟ್‌ನ ಅಬ್ಬರಕ್ಕೆ ಮುಖಭಂಗ!

ವೈಯಕ್ತಿಕವಾಗಿ ಹಲವು ಸಾರ್ವಕಾಲಿಕ ದಾಖಲೆಗಳನ್ನು ಸೃಷ್ಟಿಸಿರುವ ವಿರಾಟ್ ಕೊಹ್ಲಿಗೆ ಸ್ವಂತ ನೆಲದಲ್ಲೇ ತೀವ್ರ ಹಿನ್ನಡೆ ಎದುರಾಗಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ವೈಯಕ್ತಿಕವಾಗಿ ಹಲವು ಸಾರ್ವಕಾಲಿಕ ದಾಖಲೆಗಳನ್ನು ಸೃಷ್ಟಿಸಿರುವ ವಿರಾಟ್ ಕೊಹ್ಲಿಗೆ ಸ್ವಂತ ನೆಲದಲ್ಲೇ ತೀವ್ರ ಹಿನ್ನಡೆ ಎದುರಾಗಿದೆ.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ 35 ರನ್ ಗಳ ಅಂತರದಿಂದ ಸೋಲು ಅನುಭವಿಸಿದ್ದು ಇದರೊಂದಿಗೆ ಆಸ್ಟ್ರೇಲಿಯಾ 3-2ರ ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ. 
ಇನ್ನು ಈ ಸರಣಿ ಸೋಲು ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಅತಿ ದೊಡ್ಡ ಕಪ್ಪು ಚುಕ್ಕೆಯಾಗಿದೆ. ತವರು ಮೈದಾದನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಇದುವರೆಗೆ ಸರಣಿ ಸೋಲನ್ನು ಕಂಡಿರಲಿಲ್ಲ. ಭಾರತವು ತವರು ಮೈದಾದನಲ್ಲಿ ಕೊನೆಯದಾಗಿ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-3ರ ಅಂತರದಲ್ಲಿ ಸೋಲು ಅನುಭವಸಿತ್ತು. 
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತವರು ಮೈದಾನದಲ್ಲಿ ಮೊದಲ ಬಾರಿಗೆ ಸರಣಿ ಸೋಲಿನ ಮುಖಭಂಗ ಎದುರಿಸಿದೆ. ಅಷ್ಟೇ ಯಾಕೆ ಕೊಹ್ಲಿ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ಸತತ ಮೂರು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com