ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಬಿಸಿಸಿಐನಿಂದ 20 ಕೋಟಿ ದೇಣಿಗೆ

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಬಿಸಿಸಿಐ 20 ಕೋಟಿ ರೂ. ದೇಣಿಗೆ ನೀಡಲಿದೆ
ಬಿಸಿಸಿಐ
ಬಿಸಿಸಿಐ
ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಬಿಸಿಸಿಐ 20 ಕೋಟಿ ರೂ. ದೇಣಿಗೆ ನೀಡಲಿದೆ 

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಈ ಸಾಲಿನ ಐಪಿಎಲ್ ಉದ್ಗಾಟನೆ ಪಂದ್ಯ ನಡೆಯಲಿದ್ದು ಚೆನ್ನೈನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಭಾರತೀಯ ಸಶಸ್ತ್ರ ಪಡೆ (ಭೂಸೇನೆ, ವಾಯುದಳ ಮತ್ತು ನೌಕಾಪಡೆ) ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಲು ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ.

ಸಿಒಎ ಸಶಸ್ತ್ರಪಡೆಗಳ ಕಲ್ಯಾಣಕ್ಕಾಗಿ 20 ಕೋಟಿ ರು. ನೀಡಲು ಒಪ್ಪಿಕೊಂಡಿದೆ  ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಜೊತೆಗೂಡಿ ಐಪಿಎಲ್ ಉದ್ಘಾಟನೆ ದಿನದಂದು ಒಟ್ಟೂ ಕೊಡುಗೆ ಹಣದ ಮೊದಲ ಕಂತನ್ನು  ಗಣ್ಯರಿಗೆ ಹಸ್ತಾಂತರಿಸಲಿದ್ದಾರೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಗಳು ಹೇಳೀದ್ದಾರೆ.

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಈ ಸಾಲಿನ ಐಪಿಎಲ್ ಉದ್ಘಾಟನೆ ಕಾರ್ಯಕ್ರಮವನ್ನು ಆದಷ್ಟು ಸರಳವಾಗಿ ಆಚರಿಸಲಾಗುತ್ತಿದ್ದು ಉದ್ಘಾಟನಾ ಸಮಾರಂಬಕ್ಕಾಗಿ ತೆಗೆದಿರಿಸಲಾಗಿರುವ ಹಣವನ್ನು ಸೇನಾಪಡೆಗಳ ಕಲ್ಯಾಣ ನಿಧಿಗೆ ನೀಡ;ಲಾಗುತ್ತಿದೆ. ಕಳೆದ ಆವೃತ್ತಿಯ ಐಪಿಎಲ್ ಆರಂಭಿಕ ಸಮಾರಂಭದ ಬಜೆಟ್ 15 ಕೋಟಿ ರೂಪಾಯಿಗಳಾಗಿದ್ದು ಈ ಸಾಲಿನಲ್ಲಿ 20 ಕೋಟಿ ರೂ. ಆಗಲಿದೆ ಎಂದು ಬಿಸಿಸಿಐ ಅಂದಾಜಿಸಿತ್ತು.

"ಸೇನಾ ಕಲ್ಯಾಣ ನಿಧಿ ಹಾಗೂ ರಾಷ್ಟ್ರೀಯ ರಕ್ಷಣಾ ನಿಧಿಗೆ ಈ ಮೊತ್ತವನ್ನು ಕೊಡುಗೆ ನೀಡಲಾಗುವುದು" 

"ಸಿಒಎ ಸೇನಾಪಡೆಗಳ ದೇಣಿಗೆಗಾಗಿ ಮೀಸಲಿಟ್ಟ ಮೊತ್ತದ ಬಗ್ಗೆ ನಾನು ತಿಳಿದಿಲ್ಲ, ಅದು 20 ಕೋಟಿ ರೂಪಾಯಿಗಳಿದ್ದರೆ, ಅದು ಸಂತಸದ ಸುದ್ದಿಯಾಗಿದೆ. ನಮ್ಮ ಸೈನಿಕರಿಗೆ ನಾವು ಮಾಡಬಹುದಾದ ಕನಿಷ್ಠ ಸಹಾಯವಿದೆ: ಸಿಒಎ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ಟೀಂ ಇಂಡಿಯಾ ಆಟಗಾರರು ಸೇನಾ ಕ್ಯಾಪ್ ಧರಿಸಿ ಆಟವಾಡುವ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com