ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಆಫ್ಗಾನಿಸ್ತಾನ!

ಐರ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್ ಶಿಶು ಆಫ್ಗಾನಿಸ್ತಾನ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.
ಆಫ್ಗಾನಿಸ್ತಾನ ತಂಡ
ಆಫ್ಗಾನಿಸ್ತಾನ ತಂಡ
ಡೆಹ್ರಾಡೂನ್‌: ಐರ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಕ್ರಿಕೆಟ್ ಶಿಶು ಆಫ್ಗಾನಿಸ್ತಾನ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ. 
ಮೊದಲು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಪೇರಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ್ದ 314 ರನ್ ಪೇರಿಸಿತ್ತು. ನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಐರ್ಲೆಂಡ್ ತಂಡವನ್ನು ಆಫ್ಘಾನ್ ತಂಡ 288 ರನ್ ಗಳಿಗೆ ಕಟ್ಟಿ ಹಾಕಿತ್ತು. ಇದರೊಂದಿಗೆ 147 ರನ್ ಗಳ ಗುರಿ ಬೆನ್ನಟ್ಟಿದ ಆಫ್ಗಾನ್ 3 ವಿಕೆಟ್ ನಷ್ಟಕ್ಕೆ 149 ರನ್ ಪೇರಿಸುವ ಮೂಲಕ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿದೆ.
ಅಫ್ಘಾನಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್‌ ತಂಡದ 11 ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಟಿಮ್ ಮುರ್ತಾಘ್ ಅವರು ಎರಡೂ ಇನಿಗ್ಸ್‌ಗಳಲ್ಲಿ 25 ರನ್‌ ಗೂ ಅಧಿಕ ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ವಿಶಿಷ್ಟ ದಾಖಲೆ ಮಾಡಿದರು. ಜತೆಗೆ, ಸ್ಟಾರ್‌ ಆಲ್‌ರೌಂಡರ್‌ ರಶೀದ್‌ ಖಾನ್‌ ದ್ವಿತೀಯ ಇನಿಂಗ್ಸ್ ನಲ್ಲಿ 82 ರನ್‌ ನೀಡಿ ಐದು ವಿಕೆಟ್‌ ಗೊಂಚಲು ಪಡೆದರು. ಇದರೊಂದಿಗೆ ಎಲ್ಲ ಮೂರು ಮಾದರಿಗಳಲ್ಲಿ ಐದು ವಿಕೆಟ್‌ ಗೊಂಚಲು ಪಡೆದ ವಿಶ್ವದ 9ನೇ ಬೌಲರ್‌ ಎಂಬ ಮೈಲಿಗಲ್ಲು ಸೃಷ್ಟಿಸಿದರು.  
ಮೊದಲ ಇನಿಂಗ್ಸ್‌ ನಲ್ಲಿ 75 ಎಸೆತಗಳಲ್ಲಿ 54 ರನ್‌ ಗಳಿಸುವ ಮೂಲಕ ಐರ್ಲೆಂಡ್‌ 172 ರನ್‌ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಚೊಚ್ಚಲ ಅರ್ಧ ಶತಕದಲ್ಲಿ ಎರಡು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳಿದ್ದವು. ಟಿಮ್ ಮುರ್ತಾಘ್ ಹಾಗೂ ಜಾರ್ಜ್‌ ಡಾಕ್ರೆಲ್‌ (39 ರನ್‌) ಜೋಡಿಯು ಕೊನೆಯ ವಿಕೆಟ್‌ಗೆ 87 ರನ್‌ ಕಲೆ ಹಾಕಿತ್ತು
ದ್ವಿತೀಯ ಇನಿಂಗ್ಸ್‌ ನಲ್ಲಿ ಟಿಮ್ ಮುರ್ತಾಘ್ 32 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 27 ರನ್‌ ದಾಖಲಿಸಿದ್ದರು. ಈ ಇನಿಂಗ್ಸ್‌ನಲ್ಲಿ ಐರ್ಲೆಡ್‌ 93 ಓವರ್‌ಗಳಲ್ಲಿ 288 ರನ್‌ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಏಳು ವಿಕೆಟ್‌ಗಳಿಂದ ಜಯ ಸಾಧಿಸಿತು. 
ಐರ್ಲೆಂಡ್‌ ವಿರುದ್ಧ ಮೊದಲ ಇನಿಂಗ್ಸ್‌ ನಲ್ಲಿ 20 ರನ್‌ ನೀಡಿ ಎರಡು ವಿಕೆಟ್‌ ಪಡೆದಿದ್ದರು. ಅದೇ ಲಯ ಮುಂದುವರಿಸಿದ ರಶೀದ್‌, ದ್ವಿತೀಯ ಇನಿಂಗ್ಸ್ ನಲ್ಲೂ ಐರ್ಲೆಂಡ್‌ ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಸ್ತುತ ವಿಶ್ವದಲ್ಲೇ ರಶೀದ್‌ ಖಾನ್‌ ಅದ್ಭುತ ಸ್ಪಿನ್ನರ್‌ ಹೊರಹೊಮ್ಮಿದ್ದಾರೆ. ಇವರು 2015ರಲ್ಲಿ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ್ದರು. 
ಎಲ್ಲ ಮೂರು ಮಾದರಿಯಲ್ಲಿ ಐದು ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ದಾಖಲೆ ಶ್ರೀಲಂಕಾದ ಅಜಂತಾ ಮೆಂಡೀಸ್‌ ಅವರ ಹೆಸರಿನಲ್ಲಿದೆ. ಇವರ ಬಳಿಕ, ಇಮ್ರಾನ್‌ ತಾಹೀರ್‌, ಭಾರತದ ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾಧವ್‌ ಹಾಗೂ ಶಕೀಬ್‌ ಅಲ್‌ ಹಸನ್‌ ಅವರೊಂದಿಗೆ ಇದೀಗ ರಶೀದ್‌ ಖಾನ್‌ ಸೇರ್ಪಡೆಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com