ಐವರು ಆಟಗಾರರಿಗೆ ಈ ಐಪಿಎಲ್ ಕೊನೆ, ಆ ಲೆಜೆಂಡ್ ಆಟಗಾರರು ಯಾರ್ಯಾರು ಗೊತ್ತ?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 2008ರಿಂದ ಆರಂಭವಾದಾಗಿಲಿಂದಲೂ ಹಲವು ಆಟಗಾರರ ಹುಟ್ಟಿಗೆ ಕಾರಣವಾಗಿದೆ. ಇನ್ನು ತಮ್ಮ ಸಾಮರ್ಥ್ಯ ತೋರಿಸಲು ಒಂದು ಒಳ್ಳೆಯ ವೇದಿಕೆ ಇದಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 2008ರಿಂದ ಆರಂಭವಾದಾಗಿಲಿಂದಲೂ ಹಲವು ಆಟಗಾರರ ಹುಟ್ಟಿಗೆ ಕಾರಣವಾಗಿದೆ. ಇನ್ನು ತಮ್ಮ ಸಾಮರ್ಥ್ಯ ತೋರಿಸಲು ಒಂದು ಒಳ್ಳೆಯ ವೇದಿಕೆ ಇದಾಗಿತ್ತು.
ಐಪಿಎಲ್ 12 ಆವೃತ್ತಿಗೆ ಕೆಲ ತಿಂಗಳುಗಳು ಬಾಕಿಯಿದ್ದು ಈ ಮಧ್ಯೆ ಕೆಲ ಲೆಜೆಂಡ್ ಆಟಗಾರರಿಗೆ ಈ ಬಾರಿಯ ಐಪಿಎಲ್ ಕೊನೆಯ ಆವೃತ್ತಿಯಾಗುವ ಸಾಧ್ಯತೆ ಇದೆ. 
ಯುವರಾಜ್ ಸಿಂಗ್
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುವರಾಜ್ ಸಿಂಗ್ ಆರಂಭಿಕ ಐಪಿಎಲ್ ನಲ್ಲಿ ಮೆರೆದಾಡಿದ್ದರು. ಆದರೆ ಇದೀಗ ಅವರ ಸಾಮರ್ಥ್ಯ ಕುಸಿದಿದ್ದು 16 ಕೋಟಿ ರುಪಾಯಿ ಹರಾಜು ಬೆಲೆಯನ್ನು ಹೊಂದಿದ್ದ ಯುವರಾಜ್ ಸಿಂಗ್ ಅವರ ಸದ್ಯದ ಬೆಲೆ 1 ಕೋಟಿ ರುಪಾಯಿ ಆಗಿದೆ. 37 ವರ್ಷದ ಯುವಿ ಆಟ ಕಳಪೆಯಾಗಿದ್ದು ಈ ಬಾರಿಯ ಐಪಿಎಲ್ ಅವರಿಗೆ ಕೊನೆಯ ಐಪಿಎಲ್ ಆಗುವ ಸಾಧ್ಯತೆ ಇದೆ.
ಶೇನ್ ವಾಟ್ಸನ್
37 ವರ್ಷ ವಯಸ್ಸಾಗಿದ್ದರೂ ವಯಸ್ಸಿನ ಮಿತಿಯನ್ನು ಮೀರಿ ಶೇನ್ ವಾಟ್ಸನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. 2018ರಲ್ಲಿ ಬ್ಯಾಟ್ ಮತ್ತು ಬೌಲಿಂಗ್ ನಲ್ಲಿ ವಾಟ್ಸನ್ ವಿಜೃಂಬಿಸಿದ್ದರು. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದ ಶೇನ್ ವಾಟ್ಸನ್ ತಂಡ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಆವೃತ್ತಿಯಲ್ಲಿ ವಾಟ್ಸನ್ 15 ಪಂದ್ಯಗಳ ಪೈಕಿ 555 ರನ್ ಪೇರಿಸಿದ್ದರು. ಇನ್ನು 38 ವರ್ಷಕ್ಕೆ ಕಾಲಿಡಲಿರುವ ವಾಟ್ಸನ್ ಗೆ ಈ ಬಾರಿಯ ಐಪಿಎಲ್ ಕೊನೆಯದಾಗಬಹುದು. 
ಎಬಿಡಿ ವಿಲಿಯರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 2020ರ ಆವೃತ್ತಿಯ ಐಪಿಎಲ್ ನಲ್ಲಿ ಆಡುವ ಸಾಧ್ಯತೆ ಕಡಿಮೆ ಇದೆ. ಆರ್ಸಿಬಿ ತಂಡದ ಎಬಿಡಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಕ್ರಿಸ್ ಗೇಯ್ಲ್
ಯೂನಿವರ್ಸಸ್ ಬಾಸ್ ಎಂದು ಕರೆದುಕೊಳ್ಳುವ ಕ್ರಿಸ್ ಗೇಯ್ಲ್ ಅವರು ಐಪಿಎಲ್ ನಲ್ಲಿ 111 ಇನ್ನಿಂಗ್ಸ್ ಆಡಿದ್ದು 3994 ರನ್ ಪೇರಿಸಿದ್ದಾರೆ. ಈ ಮೂಲಕ ಕಠಿಣ ಸ್ಪರ್ಧೆ ನೀಡುತ್ತಿರುವ ಕ್ರಿಸ್ ಗೇಯ್ಲ್ ಅವರ ಬ್ಯಾಟಿಂಗ್ ಕೆಲ ವರ್ಷಗಳಿಂದ ಛಾಪು ಕಳೆದುಕೊಳ್ಳುತ್ತಿದೆ. ಸುಮಾರು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿದಿಸಿದ್ದರು. ಸದ್ಯ ಗೇಯ್ಲ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದೆ.
ಇಮ್ರಾನ್ ತಾಹೀರ್
ಚುಟುಕು ಕ್ರಿಕೆಟ್ ನಲ್ಲಿ ನಂಬರ್ 1 ಬೌಲರ್ ಎನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಬೌಲರ್ 37 ವರ್ಷದ ಇಮ್ರಾನ್ ತಾಹೀರ್ ಸಹ ಕಳೆದ ಕೆಲ ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಒಂದು ಕಡೆ ವಯಸ್ಸು ಜಾಸ್ತಿಯಾಗುತ್ತಿರುವುದು. ತಾಹೀರ್ ಅವರು ಮುಂದಿನ ಐಪಿಎಲ್ ಆವೃತ್ತಿ ಕೊನೆಯಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com