ಸ್ಪಾಟ್ ಫಿಕ್ಸಿಂಗ್ ಕುರಿತು ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಮಾಹಿ!

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ಸೂಕ್ತ ಸಮಯದಲ್ಲಿ ಮಾತನಾಡುವುದಾಗಿ 2013 ರ ಚಾಂಪಿಯನ್ಸ್ ಟ್ರೋಫಿಯ ಪತ್ರಿಕಾಗೋಷ್ಠಿ ವೇಳೆ ಮಹೇಂದ್ರ ಸಿಂಗ್ ಧೋನಿ ಹೇಳಿದ್ದರು. ಈಗ ಆ ಸೂಕ್ತ

Published: 22nd March 2019 12:00 PM  |   Last Updated: 22nd March 2019 03:39 AM   |  A+A-


Spot-fixing can happen without players knowing: Dhoni

ಸ್ಪಾಟ್ ಫಿಕ್ಸಿಂಗ್ ಕುರಿತು ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಮಾಹಿ!

Posted By : SBV SBV
Source : Online Desk
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ಸೂಕ್ತ ಸಮಯದಲ್ಲಿ ಮಾತನಾಡುವುದಾಗಿ 2013 ರ ಚಾಂಪಿಯನ್ಸ್ ಟ್ರೋಫಿಯ ಪತ್ರಿಕಾಗೋಷ್ಠಿ ವೇಳೆ ಮಹೇಂದ್ರ ಸಿಂಗ್ ಧೋನಿ ಹೇಳಿದ್ದರು. ಈಗ ಆ ಸೂಕ್ತ ಸಮಯ ಬಂದಿದ್ದು ಸ್ಪಾಟ್ ಫಿಕ್ಸಿಂಗ್ ಗೆ ಸಂಬಂಧಿಸಿದಂತೆ ಮಾಹಿ ಮಾತನಾಡಿದ್ದಾರೆ. 

ರೋರ್ ಆಫ್ ದಿ ಲಯನ್ ಎಂಬ ಡಾಕ್ಯುಮೆಂಟರಿಗೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಹೇಂದ್ರ ಸಿಂಗ್ ಧೋನಿ ಆಟಗಾರರಿಗೆ ಗೊತ್ತಿಲ್ಲದಂತೆ ಸ್ಪಾಟ್ ಫಿಕ್ಸಿಂಗ್ ನಡೆಯುವ ಸಾಧ್ಯತೆಗಳಿರುತ್ತವೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ

ಇದೇ ವೇಳೆ 2013 ರನ್ನು ತಮ್ಮ ಜೀವನದ ಅತ್ಯಂತ ಸವಾಲಿನ ವರ್ಷವಾಗಿತ್ತು ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದು ಆ ವರ್ಷದಲ್ಲಿ ಖಿನ್ನನಾದಷ್ಟು ಬೇರಾವ ವರ್ಷದಲ್ಲೂ ಆಗಿರಲಿಲ್ಲ ಎಂದಿದ್ದಾರೆ.

ಕ್ರೀಡಾಪಟುಗಳಿಗೆ ಅರಿವಿಲ್ಲದಂತೆ ಸ್ಪಾಟ್ ಫಿಕ್ಸಿಂಗ್ ನಡೆಯುವ ಸಾಧ್ಯತೆಯೂ ಇರುತ್ತದೆ. ಸ್ಪಾಟ್ ಫಿಕ್ಸಿಂಗ್ ವಿಷಯ ಚರ್ಚೆಯಾದಾಗ ನನ್ನ ಹೆಸರೂ ಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ನಾನು ಮತ್ತು ಇಡೀ ತಂಡವೇ ಸ್ಪಾಟ್ ಫಿಕ್ಸಿಂಗ್ ನಲ್ಲಿ ಶಾಮೀಲಾಗಿದೆ ಎನ್ನುವಂತೆ ಬಿಂಬಿಸಲಾಗಿತ್ತು. 

ಯಾರು ಬೇಕಾದರೂ ಸ್ಪಾಟ್ ಫಿಕ್ಸಿಂಗ್ ಮಾಡಬಹುದು, ಅಂಪೈರ್ ಗಳು ಮಾಡಬಹುದು, ಬ್ಯಾಟ್ಸ್ಮನ್ ಗಳು, ಬೌಲರ್ ಗಳೂ ಮಾಡಬಹುದು ಆದರೆ ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ (ಬಹುಪಾಲು) ಆಟಗರರು ಶಾಮೀಲಾಗಬೇಕಾಗುತ್ತದೆ ಎಂದು ಧೋನಿ ಹೇಳಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp