ಐಪಿಎಲ್:2019: ಭಜ್ಜಿ, ಇಮ್ರಾನ್ ಬೌಲಿಂಗ್ ಗೆ ತತ್ತರಿಸಿದ ಆರ್‌ಸಿಬಿ 70ಕ್ಕೆ ಆಲೌಟ್

: ಇಂದಿನಿಂದ (ಶನಿವಾರ) ಪ್ರಾರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯಪ್ರಥಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್...

Published: 23rd March 2019 12:00 PM  |   Last Updated: 23rd March 2019 09:45 AM   |  A+A-


IPL 2019, CSK vs RCB Live Cricket Score Online: Harbhajan Singh dismissed Virat Kohli, Moeen Ali and Ab de Villiers

ಹರ್ಭಜನ್ ಸಿಂಗ್

Posted By : RHN RHN
Source : Online Desk
ಚೆನ್ನೈ: ಇಂದಿನಿಂದ (ಶನಿವಾರ) ಪ್ರಾರಂಭವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯಪ್ರಥಮ ಪಂದ್ಯದಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಗಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಿಎಸ್‌ಕೆ ಮಾರಕ ಬೌಲಿಂಗ್ ಗೆ ತತ್ತರಿಸಿದೆ. 17.1 ಓವರ್ ಗಳಲ್ಲಿ ಕೇವಲ 70  ರನ್ ಗಳಿಸಿ ಕೊಹ್ಲಿ ನಾಯಕತ್ವದ ಆರ್‌ಸಿಬಿ ಆಲೌಟ್ ಆಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು  ಪರ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ (6) ಮೊಯಿನ್ ಅಲಿ (9), ಎಬಿ ಡಿ ವಿಲಿಯರ್ಸ್ (9),  ಶಿಮ್ರಾನ್ ಹೆಟ್ಮಾಯೆರ್ (0), ಶಿವಂ ದುಬೆ (2),  ಕಾಲಿನ್ ಡಿ ಗ್ರಾಂಡ್‌ಹೋಮ್ (4) , ನವದೀಪ್ ಸೈನಿ (2),, ಯುಜ್ವೇಂದ್ರ ಚಹಲ್ (4), ಉಮೇಶ್ ಯಾದವ್ (1) ಹಾಗೂ ಪಾರ್ಥಿವ್ ಪಟೇಲ್ (29) ರನ್ ಗಳಿಸಿದ್ದರು. 

ಇನ್ನು ಚೆನ್ನೈ ಪರ ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹೀರ್ ತಲಾ ಮೂರು ವಿಕೆಟ್, ರವೀಂದ್ರ ಜಡೇಜಾ ಎರಡು ಹಾಗೂ ಡ್ವೇನ್ ಬ್ರಾವೋ ಒಂದು ವಿಕೆಟ್ ಪಡೆದು ಮಿಂಚಿದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp