ಐಪಿಎಲ್ ಆರಂಭೋತ್ಸವಕ್ಕೆ ಮೀಸಲಾಗಿದ್ದ 20 ಕೋಟಿ ರು. ಭಾರತೀಯ ಸೇನೆಗೆ ನೀಡಲಾಗಿದೆ: ಬಿಸಿಸಿಐ

ಐಪಿಎಲ್ ಆರಂಭೋತ್ಸವಕ್ಕೆ ಮೀಸಲಾಗಿದ್ದ 20 ಕೋಟಿ ರುಪಾಯಿಯನ್ನು ಸಿಆರ್ ಪಿಎಫ್ ಮತ್ತು ಸಶಸ್ತ್ರ ಪಡೆಗಳ ಕಲ್ಯಾಣ ನಿಧಿಗೆ ನೀಡಲಾಗಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಐಪಿಎಲ್ ಆರಂಭೋತ್ಸವಕ್ಕೆ ಮೀಸಲಾಗಿದ್ದ 20 ಕೋಟಿ ರುಪಾಯಿಯನ್ನು ಸಿಆರ್ ಪಿಎಫ್ ಮತ್ತು ಸಶಸ್ತ್ರ ಪಡೆಗಳ ಕಲ್ಯಾಣ ನಿಧಿಗೆ ನೀಡಲಾಗಿದೆ ಎಂದು ಶನಿವಾರ ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
40 ಸಿಆರ್ ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ಉಗ್ರ ದಾಳಿಯ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಅದ್ಧೂರಿ ಆರಂಭೋತ್ಸವ ಕೈಬಿಟ್ಟಿದ್ದು, ಅದಕ್ಕೆ ಮೀಸಲಾಗಿದ್ದ 20 ಕೋಟಿ ರುಪಾಯಿಯನ್ನು ಸೇನಾ ಕಲ್ಯಾಣ ನಿಧಿಗೆ ನೀಡಲಾಗಿದೆ.
ಭಾರತೀಯ ಸೇನೆಗೆ 11 ಕೋಟಿ, ಸಿಆರ್ ಪಿಎಫ್ ಗೆ 7 ಕೋಟಿ ರು. ಮತ್ತು ನೌಕಾಪಡೆ ಹಾಗೂ ವಾಯುಪಡೆಗೆ ತಲಾ 1 ಕೋಟಿ ರುಪಾಯಿ ನೀಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಇಂದು ಚೆನ್ನೈನಲ್ಲಿ ಐಪಿಎಲ್ 12ನೇ ಆವೃತ್ತಿಗೆ ಚಾಲನೆ ನೀಡಲಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಉದ್ಗಾಟನೆ ಪಂದ್ಯ ನಡೆಯುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ಟೀಂ ಇಂಡಿಯಾ ಆಟಗಾರರು ಸೇನಾ ಕ್ಯಾಪ್ ಧರಿಸಿ ಆಟವಾಡುವ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದರು. ಈಗ ಬಿಸಿಸಿಐ ಭಾರತೀಯ ಸೇನೆಗೆ 20 ಕೋಟಿ ರುಪಾಯಿ ದೇಣಿಗೆ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com