ಒಂದೇ ಓವರ್ ನಲ್ಲಿ 6 ಸಿಕ್ಸರ್, 25 ಎಸೆತಗಳಲ್ಲೇ ಶತಕ, ನೂತನ ವಿಶ್ವ ದಾಖಲೆ ನಿರ್ಮಾಣ!

ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಅಪರೂಪದ ದಾಖಲೆಯೊಂದು ದಾಖಲಾಗಿದ್ದು, ಟಿ10 ಪಂದ್ಯವೊಂದರಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ಯಾಟ್ಸಮನ್ ಕೇವಲ 25 ಎಸೆತಗಳಲ್ಲೇ ಶತಕ ಸಿಡಿಸಿ ನೂತನ ದಾಖಲೆ ನಿರ್ಮಾಣ ಮಾಡಿದ್ದಾನೆ.
ದಾಖಲೆ ಶತಕ ಸಿಡಿಸಿದ ವಿಲ್ ಜಾಕ್ಸ್
ದಾಖಲೆ ಶತಕ ಸಿಡಿಸಿದ ವಿಲ್ ಜಾಕ್ಸ್
ದುಬೈ: ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ಅಪರೂಪದ ದಾಖಲೆಯೊಂದು ದಾಖಲಾಗಿದ್ದು, ಟಿ10 ಪಂದ್ಯವೊಂದರಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ಯಾಟ್ಸಮನ್ ಕೇವಲ 25 ಎಸೆತಗಳಲ್ಲೇ ಶತಕ ಸಿಡಿಸಿ ನೂತನ ದಾಖಲೆ ನಿರ್ಮಾಣ ಮಾಡಿದ್ದಾನೆ.
ಹೌದು.. ಇಂಗ್ಲೆಂಡ್ ತಂಡದ ಉದಯೋನ್ಮಖ ಆಟಗಾರ ವಿಲ್ ಜಾಕ್ಸ್ ಕೇವಲ 25 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲಿಷ್ ಕೌಂಟಿ ಟಿ10 ಲೀಗ್ ಸರ್ರೆ ತಂಡದ ಪರವಾಗಿ ಬ್ಯಾಟಿಂಗ್​ ಮಾಡಿದ ವಿಲ್​​ ಜಾಕ್ಸ್​ ಈ ಅದ್ವಿತೀಯ ಸಾಧನೆ ಮಾಡಿದ್ದಾನೆ. ಲಂಕಾಷೈರ್ ವಿರುದ್ಧ ನಡೆದ ಈ ಪಂದ್ಯದಲ್ಲಿ 20 ರ ಹರೆಯದ ಜಾಕ್ಸ್​ ಅವರ ಬ್ಯಾಟ್​ ನಿಂದ 8 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್ ​ಗಳು ಸಿಡಿದೆವು. ಅದರಲ್ಲೂ ಸ್ಟೀಫನ್ ಪೆರ್ರಿ ಓವರ್​ ನಲ್ಲಿ ಸತತ 6 ಎಸೆತಗಳನ್ನು ಸಿಕ್ಸರ್ ​ಗೆ ಅಟ್ಟುವ ಮೂಲಕ ಜಾಕ್ಸ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 
ಈ ಮೂಲಕ ಒಂದೇ ಓವರ್ ​ನ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಾಕ್ಸ್​ ಸ್ಥಾನ ಪಡೆದಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ವಿಶ್ವ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಖ್ಯಾತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 
ಇದಕ್ಕೂ ಮುನ್ನ ಟಿ20 ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್​ ಕ್ರಿಸ್​ ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಹಾಗೆಯೇ ಏಕದಿನ ಕ್ರಿಕೆಟ್ ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್​ 31 ಎಸೆತಗಳಲ್ಲಿ ಶತಕ ಪೂರೈಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಜಾಕ್ಸ್​ ಕೇವಲ 25 ಎಸೆತಗಳಲ್ಲಿ ಸೆಂಚುರಿ ಬಾರಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com