ಗೋ ಪಾಪಾ.. ಗೋ.. ಎನ್ನುತಲ್ಲೇ ಎದುರಿಗೆ ಇದ್ದವರ ಚಿವುಟಿದ ಧೋನಿ ಪುತ್ರಿ ಜೀವಾ, ವಿಡಿಯೋ ವೈರಲ್!

ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅಂತೆಯೇ ಅತ್ತ ಮೈದಾನದಲ್ಲಿ ಧೋನಿ ಪುತ್ರಿ ಜೀವಾಳ ತುಂಟಾಟ ಕೂಡ ಮುಂದುವರೆದಿದೆ.

Published: 27th March 2019 12:00 PM  |   Last Updated: 27th March 2019 07:53 AM   |  A+A-


Ziva Dhoni leads the cheer for MS Dhoni as CSK battle Delhi Capitals

ಸಂಗ್ರಹ ಚಿತ್ರ

Posted By : SVN SVN
Source : Online Desk
ಚೆನ್ನೈ: ಪ್ರಸಕ್ತ ವರ್ಷದ ಐಪಿಎಲ್ ಟೂರ್ನಿಯಲ್ಲಿ  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅಂತೆಯೇ ಅತ್ತ ಮೈದಾನದಲ್ಲಿ ಧೋನಿ ಪುತ್ರಿ ಜೀವಾಳ ತುಂಟಾಟ ಕೂಡ ಮುಂದುವರೆದಿದೆ.

ಕಳೆದೆರಡು ದಿನಗಳ ಹಿಂದೆ ಇದೇ ಜೀವಾ ತನ್ನ ತಂದೆಗೆ ಐದು ಭಾಷೆಗಳಲ್ಲಿ ಉತ್ತರಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಇದೇ ಜೀವಾ ಮೈದಾನದಲ್ಲಿ ಮಾಡುತ್ತಿರುವ ತುಂಟಾಟದ ವಿಡಿಯೋಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ. ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ತಂಡಗಳ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ವೇಳೆಯಲ್ಲೂ ತನ್ನ ತಂದೆಯನ್ನು ಹುರಿದುಂಬಿಸುವುದಕ್ಕೆ ಕ್ರೀಡಾಂಗಣಕ್ಕೆ ಆಗಮಿಸಿದ್ದ ಜೀವಾ ತನ್ನ ತುಂಟಾಟದ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾಳೆ.

ಧೋನಿ ಕ್ರೀಸ್ ಗೆ ಹೋಗುತ್ತಿದ್ದಂತೆಯೇ ಗೋ ಪಾಪಾ.. ಗೋ ಎಂದು ಕೂಗಿ ಅವರನ್ನು ಹುರಿದುಂಬಿಸಿದ್ದಳು. ಬಳಿಕ ಪಾಪಾ.. ಕಮಾನ್ ಪಾಪಾ ಎಂದು ಕೂಗುತ್ತಲೇ ಎದುರಿಗಿದ್ದ ವ್ಯಕ್ತಿಯ ಚಿವುಟಿದ್ದಾಳೆ. ಈ ವಿಡಿಯೋಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp