ಐಪಿಎಲ್ 2019: ಪಂಜಾಬ್ ವಿರುದ್ಧ ಕೋಲ್ಕತಾಗೆ 28 ರನ್ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ - ಐಪಿಎಲ್ 2019ನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೆಕೆಆರ್ 28 ರನ್ ಅಂತರದ ಜಯ ಸಾಧಿಸಿದೆ.

Published: 28th March 2019 12:00 PM  |   Last Updated: 28th March 2019 06:21 AM   |  A+A-


IPL 2019: Kolkata Knight Riders beat Kings XI Punjab by 28 runs

ಐಪಿಎಲ್ 2019: ಪಂಜಾಬ್ ವಿರುದ್ಧ ಕೋಲ್ಕತಾಗೆ 28 ರನ್ ಗೆಲುವು

Posted By : RHN RHN
Source : Online Desk
ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ - ಐಪಿಎಲ್ 2019ನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೆಕೆಆರ್  28 ರನ್ ಅಂತರದ ಜಯ ಸಾಧಿಸಿದೆ.

ಕೆಕೆಆರ್  ಆಡಿರುವ ಎರಡೂ ಹೋಂ ಪಿಚ್ ಪಂದ್ಯಗಳಲ್ಲಿ ಜಯ ಸಾಧಿಸಿದಂತಾಗಿದೆ. ಆದರೆ ಪಂಜಾಬ್ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ ಪರ ರಾಬಿನ್ ಉತ್ತಪ್ಪ (67), ನಿತೀಶ್ ರಾಣಾ (63) ಹಾಗೂ ಆಂಡ್ರೆ ರಸೆಲ್ (48) , ಸುನೀಲ್ ನರೇನ್ (24), ನೆರವಿನಿಂದ ನಿಗದಿತ 20.0  ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್ ಬೃಹತ್ ಮೊತ್ತ ಕಲೆ ಹಾಕಿತ್ತು.

ಕೆಕೆಆರ್ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ  ಮಯಾಂಕ್ ಅಗರ್ವಾಲ್ (58), ಮನದೀಪ್ ಸಿಂಗ್ (33), ಡೇವಿಡ್ ಮಿಲ್ಲರ್ (59*) ಉತ್ತಮ ರನ್ ಪ್ರದರ್ಶನ ನೀಡಿದ್ದರು. ಆದರೆ ನಿಗದಿತ ಅವಧಿಯೊಳಗೆ 190 ರನ್ ಗಳಿಸಲಷ್ಟೇ ಸಾಧ್ಯವಾಗಿದೆ. 

ಪಂಜಾಬ್ ಪರ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಇದ್ದರೂ ಅವರೂ ಇಂದು ಹೆಚ್ಚು ಹಿಒತ್ತು ನಿಲ್ಲದೆ ಕೇವಲ 13 ಎಸೆತದಲ್ಲಿ 20 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು. 

ಮೊದಲು ಬೌಲಿಂಗ್ ಗೆ ಇಳಿದಿದ್ದ ಪ್ಂಜಾಬ್ ಪರವಾಗಿ ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಹರ್ಡೂಸ್ ಹಾಗೂ ಆಂಡ್ರೂ ಟೈ ತಲಾ ಒಂದೊಂದು ವಿಕೆಟ್ ಪಡೆದರೆ ಕೋಲ್ಕತ್ತಾ ಪರವಾಗಿ ಲೂಕಿ ಫರ್ಗ್ಯೂಸನ್ ಹಾಗೂ ಕುಲದೀಪ್ ಯಾದವ್ ತಲಾ ಎರಡು, ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆಇದ್ದರು.
Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp