ಇದೇನು ಕ್ಲಬ್ ಕ್ರಿಕೆಟ್ ಅಲ್ಲ: ಅಂಪೈರ್ ನೋಬಾಲ್ ಎಡವಟ್ಟಿಗೆ ಕೊಹ್ಲಿ ಆಕ್ರೋಶ

ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋಬಾಲ್ ಆಗಿದ್ದರೂ ಅಂಪೈರ್ ಗಳ ಎಡವಟ್ಟಿನಿಂದ ಆರ್ ಸಿಬಿ ಸೋಲುವಂತಾಗಿತ್ತು. ಇದೀಗ ಅಂಪೈರ್ ಗಳ ವಿರುದ್ಧ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕಿಡಿಕಾರಿದ್ದು, ಇದೇನು ಕ್ಲಬ್ ಕ್ರಿಕೆಟ್ ಅಲ್ಲ ಹೇಳಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಬೆಂಗಳೂರು: ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋಬಾಲ್ ಆಗಿದ್ದರೂ ಅಂಪೈರ್ ಗಳ ಎಡವಟ್ಟಿನಿಂದ ಆರ್ ಸಿಬಿ ಸೋಲುವಂತಾಗಿತ್ತು. ಇದೀಗ ಅಂಪೈರ್ ಗಳ ವಿರುದ್ಧ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಕಿಡಿಕಾರಿದ್ದು, ಇದೇನು ಕ್ಲಬ್ ಕ್ರಿಕೆಟ್ ಅಲ್ಲ ಹೇಳಿದ್ದಾರೆ.
ಐಸಿಸಿಯ ಎಲೈಟ್ ಪ್ಯಾನಲ್ ನಲ್ಲಿರುವ ಅಂಪೈರ್ ಎಸ್ ರವಿ ಅವರಿಂದಲೇ ಇಂತಹ ಪ್ರಮಾದವಾಗಿರುವುದು ನಾಯಕ ಕೊಹ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಐಪಿಎಲ್ ಪಂದ್ಯಗಳಲ್ಲಿ ಆಡುತ್ತಿದ್ದೇವೆ. ಇದೇನು ಮಾಮೂಲಿ ಕ್ಲಬ್ ಕ್ರಿಕೆಟ್ ಅಲ್ಲ. ಇಂತಹ ವೇದಿಕೆಯಲ್ಲೇ ಇಂತಹ ಗಂಭೀರ ನಿರ್ಲಕ್ಷ್ಯ ಸರಿಯಲ್ಲ. ಒಂದು ವೇಳೆ ಅಂಪೈರ್ ನೋಬಾಲ್ ಅನ್ನು ಗುರುತಿಸಿದಿದ್ದರೆ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು.  ಎಬಿಡಿ ಕ್ರೀಸ್ ನಲ್ಲಿದ್ದರು. ನೋಬಾಲ್ ನಿಂದ 1 ರನ್ ಹಾಗೂ ಹೆಚ್ಚುವರಿ ಫ್ರೀ ಹಿಟ್ ತಂಡಕ್ಕೆ ಸಿಗುತ್ತಿತ್ತು. ಆದರೆ ಅಂಪೈರ್ ಗಳ ನಿರ್ಲಕ್ಷ್ಯ ಎಲ್ಲವನ್ನೂ ಹಾಳು ಮಾಡಿದೆ. ಅಂಪೈರ್ ಗಳು ಮೈದಾನದಲ್ಲಿ ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. 
ಅಂತೆಯೇ ಪಂದ್ಯದ ಕುರಿತು ಮಾತನಾಡಿದ ಕೊಹ್ಲಿ, ಬ್ಯಾಟಿಂಗ್ ನಲ್ಲಿ ತಂಡ ಉತ್ತಮವಾಗಿತ್ತು. ಆದರೆ ಬೌಲಿಂಗ್ ನಲ್ಲಿ ನಾವು ಇನ್ನಷ್ಟು ಸುಧಾರಣೆ ಮಾಡಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ಬುಮ್ರಾ ರನ್ ಗಳ ವೇಗಕ್ಕೆ ಕಡಿವಾಣ ಹಾಕಿದರು ಎಂದು ಕೊಹ್ಲಿ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com