ರಾಜಸ್ಥಾನ, ಚೆನ್ನೈ ಬಳಿಕ ಐಪಿಎಲ್‍ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಮಾನತು?

ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಅಮಾನತುಗೊಂಡಿತ್ತು. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್‍ನಿಂದ ಅಮಾನತುಗೊಳ್ಳುವ ಸಾಧ್ಯತೆಯಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್
ಕಿಂಗ್ಸ್ ಇಲೆವೆನ್ ಪಂಜಾಬ್
ಮುಂಬೈ: ಮ್ಯಾಚ್ ಫಿಕ್ಸಿಂಗ್ ನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಅಮಾನತುಗೊಂಡಿತ್ತು. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್‍ನಿಂದ ಅಮಾನತುಗೊಳ್ಳುವ ಸಾಧ್ಯತೆಯಿದೆ.
ಪಂಜಾಬ್ ತಂಡದ ಮಾಲೀಕರಾಗಿರುವ ನೆಸ್ ವಾಡಿಯಾ ಜಪಾನ್ ನಲ್ಲಿ ಮಾದಕ ಪದಾರ್ಥಗಳೊಂದಿಗೆ ಸಿಕ್ಕಿಬಿದ್ದು 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ನೆಸ್ ವಾಡಿಯಾ ಮೇಲಿರುವ ಆರೋಪ ಸಾಬೀತಾದರೆ ಪಂಜಾಬ್ ತಂಡವನ್ನು ನಿಷೇಧಿಸುವ ಸಾಧ್ಯತೆಯಿದೆ.
ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್ ಫೀಲ್ಡ್ ಮತ್ತು ಆಫ್ ಫೀಲ್ಡ್ ನಿಯಮಗಳನ್ನು ಮೀರುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಮೀರಿ ಆರೋಪ ಸಾಬೀತಾಗಿ ದೋಷಿ ಎಂದಾದರೆ ಆ ತಂಡವನ್ನು ಅಮಾನತಿನಲ್ಲಿಡಲು ಬಿಸಿಸಿಐಗೆ ಅಧಿಕಾರವಿದೆ. 
ಬಿಸಿಸಿಐ ಇದಕ್ಕಾಗಿ ಒಂದು ಸಮಿತಿಯನ್ನು ನೇಮಿಸಲಿದ್ದು ಈ ಸಮಿತಿ ಒಂಬುಡ್ಸ್ ಮನ್ ಅವರಿಗೆ ವರದಿ ಸಲ್ಲಿಸಲಿದೆ. ಹೀಗಾಗಿ ಈ ಪ್ರಕರಣದಲ್ಲಿ ಬಿಸಿಸಿಐ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com