ಮತ್ತೆ ಮಿಂಚಿದ ಧೋನಿ: ಡೆಲ್ಲಿ ವಿರುದ್ಧ ಚೆನ್ನೈ ಗೆ ಭರ್ಜರಿ 80 ರನ್ ಗಳ ಜಯ

ಐಪಿಎಲ್ 2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪರಾಕ್ರಮ ಮತ್ತೊಮ್ಮೆ ಸಾಬೀತಾಗಿದೆ.

Published: 02nd May 2019 12:00 PM  |   Last Updated: 02nd May 2019 12:02 PM   |  A+A-


IPL 2019: Chennai Super Kings beat Delhi Capitals by eighty runs

ಮತ್ತೆ ಮಿಂಚಿದ ಧೋನಿ: ಡೆಲ್ಲಿ ವಿರುದ್ಧ ಚೆನ್ನೈ ಗೆ ಭರ್ಜರಿ 80 ರನ್ ಗಳ ಜಯ

Posted By : SBV SBV
Source : Online Desk
ಐಪಿಎಲ್ 2019 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಪರಾಕ್ರಮ ಮತ್ತೊಮ್ಮೆ ಸಾಬೀತಾಗಿದೆ. 

ಮೇ.1 ರಂದು ನಡೆದ ಸಿಎಸ್ ಕೆ-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ ಭರ್ಜರಿ 80 ರನ್ ಗಳ ಜಯ ದಾಖಲಿಸಿದೆ. 

ಸ್ಲಾಗ್ ಓವರ್ ಗಳಲ್ಲಿ ಎಂದಿನಂತೆ ಧೋನಿ (22 ಎಸೆತಗಳಲ್ಲಿ 44 ರನ್ ) ಪರಾಕ್ರಮ ಮಿಂಚಿದ್ದು, ತಮ್ಮ ಎಂದಿನ ಶೈಲಿಯಲ್ಲಿ 2 ಸಿಕ್ಸರ್ ದಾಖಲಿಸುವ ಮೂಲಕ ತಾವೊಬ್ಬ ಅದ್ಭುತ ಆಟಗಾರ ಎಂಬುದನ್ನು ನಿರೂಪಿಸಿದ್ದಾರೆ. 

ನಿಗದಿತ 20 ಓವರ್ ಗಳಲ್ಲಿ ಚೆನ್ನೈ ತಂಡ 179 ರನ್ ಗಳನ್ನು ದಾಖಲಿಸಿತ್ತು, 180 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಶಿಖರ್ ಧವನ್ (13 ಎಸೆತಗಳಲ್ಲಿ 19 ರನ್)
 ಪೃಥ್ವಿ ಶಾ (5 ಎಸೆತಗಳಲ್ಲಿ 4 ರನ್) ಗಳಿಸಿ ಔಟಾಗುವ ಮೂಲಕ ಆರಂಭಿಕ ಆಘಾತ ಎದುರಿಸಿತ್ತು. ಶ್ರೇಯಸ್ ಅಯ್ಯರ್ (31 ಎಸೆತಗಳಲ್ಲಿ 44 ರನ್ ) ಗಳಿಸಿದ್ದು ಡೆಲ್ಲಿ ಪರ ಗರಿಷ್ಠ ಮೊತ್ತವಾದರೆ ಉಳಿದ ಬ್ಯಾಟ್ಸ್ಮನ್ ಗಳು 2 ಅಂಕಿ ಸ್ಕೋರ್ ನ್ನೂ ದಾಟದೇ ಪೆವಿಲಿಯನ್ ಪರೇಡ್ ನಡೆಸಿದರು. 

ಬ್ಯಾಟಿಂಗ್ ವೈಫಲ್ಯದಿಂದಾಗಿ ಡೆಲ್ಲಿ ತಂಡ 16.2 ಓವರ್ ಗಳಿಗೆ 99 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಚೆನ್ನೈ ಎದುರು ಶರಣಾಯಿತು. ಐಪಿಎಲ್ ಪಟ್ಟಿಯಲ್ಲಿ ಈ ಗೆಲುವಿನ ಮೂಲಕ 18 ಪಾಯಿಂಟ್ ಗಳನ್ನು  ಚೆನ್ನೈ ಅಗ್ರಸ್ಥಾನದಲ್ಲಿದೆ. 
Stay up to date on all the latest ಕ್ರಿಕೆಟ್ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp