ರೋಚಕ ಪಂದ್ಯ: ಸೂಪರ್ ಓವರ್ ನಲ್ಲಿ ಹೈದರಾಬಾದ್ ತಂಡವನ್ನು ಮಣಿಸಿದ ಮುಂಬೈ ತಂಡ!

ಮುಂಬೈ ನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಮುಂಬೈ ಇಂಡಿಯನ್ಸ್-ಹೈದರಾಬಾದ್ ನಡುವಿನ ರೋಚಕ ಪಂದ್ಯ ಸೂಪರ್ ಓವರ್ ನಲ್ಲಿ ಅಂತ್ಯಕಂಡಿದ್ದು, ಮುಂಬೈ ಇಂಡಿಯನ್ಸ್ ತಂಡ ಗೆದ್ದಿದೆ.

Published: 03rd May 2019 12:00 PM  |   Last Updated: 03rd May 2019 12:34 PM   |  A+A-

Mumbai  beat Hyderabad in Super Over in match 51 of IPL 2019

ರೋಚಕ ಪಂದ್ಯ: ಸೂಪರ್ ಓವರ್ ನಲ್ಲಿ ಹೈದರಾಬಾದ್ ತಂಡವನ್ನು ಮಣಿಸಿದ ಮುಂಬೈ ತಂಡ!

Posted By : SBV SBV
Source : Online Desk
ಮುಂಬೈ ನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಮುಂಬೈ ಇಂಡಿಯನ್ಸ್-ಹೈದರಾಬಾದ್ ನಡುವಿನ ರೋಚಕ ಪಂದ್ಯ ಸೂಪರ್ ಓವರ್ ನಲ್ಲಿ ಅಂತ್ಯಕಂಡಿದ್ದು, ಮುಂಬೈ ಇಂಡಿಯನ್ಸ್ ತಂಡ ಗೆದ್ದಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162  ರನ್ ಗಳಿಸಿತ್ತು. ಸನ್ ರೈಸರ್ಸ್ ಹೈದರಾಬಾದ್ ತಂಡ ಸಹ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳನ್ನು ಗಳಿಸಿ ಮುಂಬೈ ತಂಡದ ಸಮಬಲ ಸಾಧಿಸಿತು. 

ಸಮಬಲಗೊಂಡಿದ್ದರಿಂದ ಪಂದ್ಯವನ್ನು ನಿರ್ಣಯಿಸುವುದಕ್ಕಾಗಿ ಸೂಪರ್ ಓವರ್ ಕೊಡಲಾಯಿತು. ಸೂಪರ್ ಓವರ್ ನಲ್ಲಿ ಹೈದರಾಬಾದ್ ತಂಡ 0.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 8 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ತಂಡ 0.3 ಓವರ್ ಗಳಲ್ಲಿ 9 ರನ್ ಗಳಿಸುವ ಮೂಲಕ ಸನ್ ರೈಸರ್ಸ್ ತಂಡವನ್ನು ಮಣಿಸಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp