ಮನೋವೈದ್ಯರ ಬಳಿ ಹೋಗುವಂತೆ ಅಫ್ರಿದಿಗೆ ಗೌತಮ್ ಗಂಭೀರ್ ಸಲಹೆ

ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರಿದಿಯನ್ನು ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಸಾಂದರ್ಭಿಕ  ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರಿದಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ವಿರುದ್ಧ ಕೆಲವು ಅಸಹ್ಯಕರ ವಿಚಾರಗಳನ್ನು ತನ್ನ ಪುಸ್ತಕದಲ್ಲಿ ಬರೆದುಕೊಂಡು ಬೆನ್ನಲ್ಲೇ , ಅವರಿಗೆ ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ಗೌತಮ್ ಗಂಭೀರ್ ವಾಗ್ದಾಳಿ ನಡೆಸಿದ್ದಾರೆ.

ಗೌತಮ್ ಗಂಭೀರ್ ಯಾವುದೇ ದೊಡ್ಡ ಸಾಧನೆ ಮಾಡದಿದ್ದರೂ  ಡಾನ್ ಬ್ರಾಡ್ಮನ್, ಜೇಮ್ಸ್ ಬಾಂಡ್ ರೀತಿಯಲ್ಲಿ ದೊಡ್ಡ ಸಾಧನೆ ಮಾಡಿರುವ ತರಹ ವರ್ತಿಸುತ್ತಾರೆ ಎಂದು ಇತ್ತೀಚಿಗೆ ಬಿಡುಗಡೆಗೊಂಡ ಆತ್ಮಚರಿತ್ರೆ ಗೇಮ್ ಚೇಂಜರ್ ಪುಸ್ತಕದಲ್ಲಿ ಅಫ್ರಿದಿ ಬರೆದುಕೊಂಡಿದ್ದಾರೆ. ಇದಕ್ಕೆ ಟ್ವಿಟರ್ ನಲ್ಲಿ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದು, ಅಫ್ರಿದಿ ಟ್ವಿಟರ್ ಗೆ ಟ್ಯಾಗ್ ಮಾಡಿದ್ದಾರೆ

ನೀವು ಉಲ್ಲಾಸದ ವ್ಯಕ್ತಿ, ವೈದ್ಯಕೀಯ ಪ್ರವಾಸಕ್ಕಾಗಿ ಪಾಕಿಸ್ತಾನಗಳಿಗೆ ವೀಸಾ ನೀಡುತ್ತಿದ್ದೇವೆ. ನಾನೇ ವೈಯಕ್ತಿಕವಾಗಿ  ನಿಮ್ಮನ್ನು ಮನೋವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com