ಐಪಿಎಲ್ 2019,: ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ ಸೋಲು, ಪ್ಲೇ ಆಫ್ ಕನಸು ಭಗ್ನ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 53ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ರಾಜಾಸ್ಥಾನ ರಾಯಲ್ಸ್ ವಿರುದ್ಧ ಐದು ವಿಕೆಟ್ ಸುಲಭ ಜಯ ದಾಖಲಿಸಿದೆ. ಇದರೊಡನೆ ರಾಜಸ್ಥಾನದ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ.

Published: 04th May 2019 12:00 PM  |   Last Updated: 04th May 2019 10:57 AM   |  A+A-


IPL 2019, RR vs DC: Rajasthan’s campaign ends with Delhi’s five-wicket win

ಐಪಿಎಲ್ 2019,: ಡೆಲ್ಲಿ ವಿರುದ್ಧ ರಾಜಸ್ಥಾನಕ್ಕೆ ಸೋಲು, ಪ್ಲೇ ಆಫ್ ಕನಸು ಭಗ್ನ

Posted By : RHN RHN
Source : Online Desk
ನವದೆಹಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 53ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ರಾಜಾಸ್ಥಾನ ರಾಯಲ್ಸ್ ವಿರುದ್ಧ ಐದು ವಿಕೆಟ್ ಸುಲಭ ಜಯ ದಾಖಲಿಸಿದೆ. ಇದರೊಡನೆ ರಾಜಸ್ಥಾನದ ಪ್ಲೇ ಆಫ್ ಕನಸು ನುಚ್ಚು ನೂರಾಗಿದೆ.

ದೆಹಲಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದ ವೇಳೆ ತಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.  

ಆದರೆ ತಂಡದ ಬ್ಯಾಟ್ಸ್ ಮನ್ ಗಳ ಕಳಪೆ ಪ್ರದರ್ಶನ ತಂಡ ಅಲ್ಪ ಮೊತ್ತಕ್ಕೆ ಕುಸಿಉಯುವಂತೆ ಮಾಡಿದೆ. ರಾಜಸ್ಥಾನ ಪರ ಸಂಜು ಸ್ಯಾಮ್ಸನ್ 5, ಲಿಯಾಮ್ ಲಿವಿಂಗ್ಸ್ಟೋನ್ 14, ಅಜಿಂಕ್ಯ ರಹಾನೆ 2, ಮಹಿಪಾಲ್‌ ರಾಮ್ರರ್ 8, ಶ್ರೇಯಸ್ ಗೋಪಾಲ್ 12, ಸ್ಟುವರ್ಟ್ ಬಿನ್ನಿ 0, ಕೃಷ್ಣಪ್ಪ ಗೌತಮ್ 6 ರನ್ ಗಳಿಸಲಷ್ತೇ ಶಕ್ಯವಾಗಿದ್ದರು.

ಆದರೆ ರಿಯಾನ್ ಪರಾಗ್ ತಾವು 50 ರನ್ (48 ಎಸೆತ) ಗಳಿಸಿ ತಂಡಕ್ಕೆ ತುಸು ಚೈತನ್ಯ ನೀಡಿದ್ದರು. ರಾಜಸ್ಥಾನ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಎದುರಾಳಿಗೆ ಸುಲಭ ಗುರಿ ನೀಡಿತ್ತು.

ಡೆಲ್ಲಿ ಪರವಾಗಿ ಅಮಿತ್ ಮಿಶ್ರಾ 3, ಇಶಾಂತ್ ಶರ್ಮಾ 2 ವಿಕೆಟ್ ಪಡೆದು ಮಿಂಚಿದ್ದರು. 

ರಾಜಸ್ಥಾನದ ಅಲ್ಪ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 8, ಶಿಖರ್ ಧವನ್ 16, ಶ್ರೇಯಸ್ ಅಯ್ಯರ್ 15, ಕಾಲಿನ್ ಇಂಗ್ರಾಮ್ 12 ರನ್ ಗಳಿಸಿದ್ದರೆ  ರಿಷಬ್ ಪಂತ್ ಅಜೇಯ 53 ರನ್ (38 ಎಸೆತ) ಸಿಡಿಸಿ ಗಮನ ಸೆಳೆದರು.

ಹೀಗೆ ಡೆಲ್ಲಿ 16.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ವಿಜಯದ ನಗು ಬೀರಿದೆ.
Stay up to date on all the latest ಕ್ರಿಕೆಟ್ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp