ಐಪಿಎಲ್ 2019: ಕಡೇ ಆಟವನ್ನು ಗೆದ್ದ ಆರ್‌ಸಿಬಿ, ಹೈದರಾಬಾದ್ ವಿರುದ್ಧ 4 ವಿಕೆಟ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ೨೦೧೯ ಸಾಲಿನ ಶನಿವಾರದ ಎರಡನೇ ಪಂದ್ಯದಲ್ಲಿ ತವರು ನೆಲದಲ್ಲಿ ನಡೆದ ಕಡೆಯ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್....
ಐಪಿಎಲ್ 2019: ಕಡೇ ಆಟವನ್ನು ಗೆದ್ದ ಆರ್‌ಸಿಬಿ, ಹೈದರಾಬಾದ್ ವಿರುದ್ಧ 4 ವಿಕೆಟ್ ಜಯ
ಐಪಿಎಲ್ 2019: ಕಡೇ ಆಟವನ್ನು ಗೆದ್ದ ಆರ್‌ಸಿಬಿ, ಹೈದರಾಬಾದ್ ವಿರುದ್ಧ 4 ವಿಕೆಟ್ ಜಯ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2019 ಸಾಲಿನ ಶನಿವಾರದ ಎರಡನೇ ಪಂದ್ಯದಲ್ಲಿ ತವರು ನೆಲದಲ್ಲಿ ನಡೆದ ಕಡೆಯ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 4 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈ ವೇಳೆ ಮೊದಲು ಬ್ಯಾಟಿಂಗ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ (70*)  ನೆರವಿನೊಡನೆ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಕಲೆ ಹಾಕಿತ್ತು.

ಪ್ರಾರಭಿಕರಾಗಿದ್ದ ವೃದ್ದಿಮಾನ್ ಸಹಾ(20)  ಹಾಗೂ ಮಾರ್ಟಿನ್ ಗಪ್ಟಿಲ್ (30) ರನ್ ಗಳಿಸಿದ್ದರೆ ಮನ್ಬೀಶ್ ಪಾಂಡೆ ಕೇವಲ 9 ರನ್ ಗಳಿಸಿ ಔಟಾಗಿದ್ದರು. ಆ ಬಳಿಕ ಬಂದ ವಿಜಯ ಶಂಕರ್ 18 ಎಸೆತದಲ್ಲಿ 27 ರನ್ ಗಳಿಸಿದ್ದು ಹೊರತುಪಡಿಸಿದರೆ ಇನ್ನಾರೂ ಎರಡಂಕಿ ತಲುಪಲಿಲ್ಲ. ಹಾಗಾಗಿ ಹೈದರಾಬಾದ್ ಪರ ವಿಲಿಯಮ್ಸನ್ ಒಬ್ಬರೇ ಶ್ರೇಷ್ಠ ಪ್ರದರ್ಶನ ತೋರಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾಗಿದ್ದರು.

ಹೈದರಾಬಾದ್ ನೀಡಿದ್ದ ಈ ಗುರಿಯನ್ನು ಬೆನ್ನತ್ತಿದ ವಿರಾಟ್ ಕೊಹ್ಲಿ ಬಳಗದಲ್ಲಿಯೂ ಪ್ರಾರಂಭದಲ್ಲಿ ಗಟ್ಟಿ ಸವಾಲೊಡ್ಡಲು ಸಾಧ್ಯವಾಗಿರಲಿಲ್ಲ.  ಪಾರ್ಥಿವ್ ಪಟೇಲ್ ಖಾತೆ ತೆರೆಯದೇ ಶೂನ್ಯಕ್ಕೆ ಔಟಾಗಿದ್ದರೆ ನಾಯಕ ಕೊಹ್ಲಿ 1 ಬೌಂಡರಿ, 2 ಸಿಕ್ಸರ್ ನೊಡನೆ 7 ಎಸೆತಗಳಲ್ಲಿ 16 ರನ್ ಗಳಿಸಿದ್ದರು.

ಇನ್ನ್ಯು ಬಹು ನಿರೀಕ್ಷಿತ ಬ್ಯಾಟ್ಸ್ ಮನ್ ಎಬಿ ಡೆವಿಲ್ಲಿಯರ್ಸ್ ಸಹ 2 ಎಸೆತದಲ್ಲಿ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ಆ ಬಳಿಕ ಜತೆಯಾದ ಶಿಮ್ರಾನ್ ಹೆಟ್ಮಾಯೆರ್ ಹಾಗೂ ಗುರ್‌ಕೀರಾತ್ ಸಿಂಗ್ ಮನ್ ತಂಡವನ್ನು ಗೆಲುವಿನ ಹಾದಿಗೆ ಮರಳಿಸಿದ್ದಾರೆ. 

ಹೆಟ್ಮಾಯೆರ್ 6 ಸಿಕ್ಸರ್ 4 ಬೌಂಡರಿಗಳೊಡನೆ 47 ಎಸೆತಕ್ಕೆ 75 ರನ್ ಗಳಿಸಿದ್ದರೆ ಗುರ್‌ಕೀರಾತ್ ಸಿಂಗ್ ಮನ್ 1 ಸಿಕ್ಸರ್ 8 ಬೌಂಡರಿ ಗಳೊಡನೆ 48 ಎಸೆತದಲ್ಲಿ 65 ರನ್ ಕಲೆ ಹಾಕಿದರು.

ಈ ಇಬ್ಬರ ನಿರ್ಗಮದ ವೇಳೆಗೆ ಬೆಂಗಳೂರಿಗೆ ಗೆಲುವು ಪಕ್ಕಾ ಆಗಿತ್ತು. ಇದಾಗಿಯೂ ಅಂತಿಮಸುತ್ತಿನ್ಬಲ್ಲಿ ಕ್ರೀಸ್ ಗಿಳಿದ ಉಮೇಶ್ ಯಾದವ್,ಹಾಗೂ ಕಾಲಿನ್ ಕ್ರಮವಾಗಿ 9 ಹಾಗೂ 3 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com