ಐಪಿಎಲ್ ನಿಂದ ಹೊರನಡೆದ ಹೈದರಾಬಾದ್, ಡೆಲ್ಲಿಗೆ 2 ವಿಕೆಟ್ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಸಾಲಿನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್ ಗಳ ಜಯ ದಾಕಲಿಸಿದೆ.

Published: 08th May 2019 12:00 PM  |   Last Updated: 08th May 2019 11:46 AM   |  A+A-


IPL 2019: Delhi Capitals beat Sunrisers Hyderabad by 2 wickets

ಐಪಿಎಲ್ ನಿಂದ ಹೊರನಡೆದ ಹೈದರಾಬಾದ್, ಡೆಲ್ಲಿಗೆ 2 ವಿಕೆಟ್ ಗೆಲುವು

Posted By : RHN RHN
Source : Online Desk
ವಿಶಾಖಪಟ್ಟಣಂ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಸಾಲಿನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 2 ವಿಕೆಟ್ ಗಳ ಜಯ ದಾಖಲಿಸಿದೆ.

ಇದರೊಡನೆ ಸನ್‌ರೈಸರ್ಸ್  ತಂಡ ಈ ಸಾಲಿನ ಐಪಿಎಲ್ ನಿಂದ ಹೊರಬಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಕ್ವಾಲಿಫೈಯರ್ ಗೆ ಅರ್ಹತೆ ಪಡೆದಿದೆ. ಅದರಲ್ಲಿ ಡೆಲ್ಲಿ ನಿನ್ನೆನ ಪಂದ್ಯದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಬೇಕಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದ ಡೆಲ್ಲಿ ಹೈದರಾಬಾದ್ ತಂಡಕ್ಕೆ ಮೊದಲು ಬ್ಯಾಟಿಗ್ ಗೆ ಅವಕಾಶ ನೀಡಿತ್ತು. ಆದರೆ ಹೈದರಾಬಾದ್ ತಂಡ ಎಂಟು ವಿಕೆಟ್ ನಷ್ಟಕ್ಕೆ 162 ರನ್ ಗಳಿಸುವುವಷ್ಟೇ ಸಫಲವಾಗಿತ್ತು.

ಈ ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಉತ್ತಮ ಪ್ರಾರಂಭ ಕಂಡಿದೆ. ಶಿಖರ್ ಧವನ್ 17  ರನ್ ಗೆ ಔಟಾದರೂ ಸಹ  ಪೃಥ್ವಿ ಶಾ 38 ಎಸೆತದಲ್ಲಿ 2 ಸಿಕ್ಸರ್ 6 ಬೌಂಡರಿಗಳ ಸಹಾಯದಿಂದ 56 ರನ್ ಗಳಿಸಿದ್ದರು.

ಇನ್ನು ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ 8 ರನ್ ಗಳಿಸಿದ್ದರೆ ಕಾಲಿನ್ ಮುನ್ರೋ 14 ರಿಷಪ್ ಪಂತ್ 49 ರನ್ ಗಳಿಸಿದ್ದರು.ಇದರಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸೇರಿತ್ತು. 
Stay up to date on all the latest ಕ್ರಿಕೆಟ್ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp