ಚೆಂಡು ವಿಕೆಟ್‌ಗೆ ಬಡಿಯದಿದ್ದರೂ ರನೌಟ್; ಐಪಿಎಲ್ ಇತಿಹಾಸದಲ್ಲೇ ವಿಚಿತ್ರ ರನೌಟ್, ವಿಡಿಯೋ ವೈರಲ್!

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಚಿತ್ರ ರನೌಟ್ ಗಳ ಪಟ್ಟಿ ದೊಡ್ಡದಿದೆ. ಆದರೆ ಐಪಿಎಲ್ ನಲ್ಲಿ ಇತಿಹಾಸದಲ್ಲೇ ಇಂತಹ ವಿಚಿತ್ರ ರನೌಟ್ ಅನ್ನು ನೀವು ನೋಡಿರಲಿಕ್ಕಿಲ್ಲ.
ಅಮಿತ್ ಮಿಶ್ರಾ
ಅಮಿತ್ ಮಿಶ್ರಾ
ವಿಶಾಖಪಟ್ಟಣಂ: ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಚಿತ್ರ ರನೌಟ್ ಗಳ ಪಟ್ಟಿ ದೊಡ್ಡದಿದೆ. ಆದರೆ ಐಪಿಎಲ್ ನಲ್ಲಿ ಇತಿಹಾಸದಲ್ಲೇ ಇಂತಹ ವಿಚಿತ್ರ ರನೌಟ್ ಅನ್ನು ನೀವು ನೋಡಿರಲಿಕ್ಕಿಲ್ಲ. ಹೌದು ವಿಕೆಟ್ ಗೆ ಚೆಂಡು ಬಡಿಯದಿದ್ದರೂ ಬ್ಯಾಟ್ಸ್ ಮನ್ ರನೌಟ್ ಆಗಿರುವ ವಿಚಿತ್ರ ಘಟನೆ ನಡೆದಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಅಮಿತ್ ಮಿಶ್ರಾ ವಿಚಿತ್ರವಾಗಿ ರನೌಟ್ ಆಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಹೈದರಾಬಾದ್ ವಿರುದ್ಧ ಗೆಲ್ಲಲು ಡೆಲ್ಲಿ ತಂಡಕ್ಕೆ ಕೊನೆಯ ಓವರ್ ನಲ್ಲಿ 5 ರನ್ ಬೇಕಿತ್ತು. ಈ ವೇಳೆ ಖಲೀಲ್ ಅಹ್ಮದ್ ಬೌಲಿಂಗ್ ಮಾಡಿದ್ದು 20ನೇ ಓವರ್ ನ 4ನೇ ಎಸೆತದಲ್ಲಿ ಅಮಿತ್ ಮಿಶ್ರಾ ಸ್ಫೋಟಕ ಹೊಡೆತಕ್ಕೆ ಮುಂದಾದರೂ ಆದರೆ ಚೆಂಡು ಕೀಪರ್ ಕೈಸೇರಿದ್ದರಿಂದ ಸಿಂಗಲ್ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಕೀಪರ್ ವಿಕೆಟ್ ಗೆ ಚೆಂಡನ್ನು ಎಸೆದರು ಅದು ಮಿಸ್ ಆಗಿ ಬೌಲರ್ ಖಲೀಲ್ ಗೆ ಸಿಕ್ಕಿತ್ತು. ಕೂಡಲೇ ಖಲೀಲ್ ಚೆಂಡನ್ನು ನಾನ್ ಸ್ಟ್ರೈಕ್ ನಲ್ಲಿನ ವಿಕೆಟ್ ಗೆ ಎಸೆದರು. ಅಮಿತ್ ಮಿಶ್ರಾ ಅಡ್ಡ ಬಂದಿದ್ದರಿಂದ ಅವರಿಗೆ ತಗುಲಿ ವಿಕೆಟ್ ಮಿಸ್ ಆಯಿತು. 
ಚೆಂಡು ಅಮಿತ್ ಮಿಶ್ರಾಗೆ ತಗುಲಿದ ಕೂಡಲೇ ಖಲೀಲ್ ರನೌಟ್ ಗೆ ಅಪೀಲ್ ಮಾಡಿದರು. ಅಂಪೈರ್ ಸತ್ಯಾಂಶ ತಿಳಿದುಕೊಳ್ಳಲು ಮೂರನೇ ಅಂಪೈರ್ ಮೊರೆ ಹೋದರು. ಅಲ್ಲಿ ನಿಜಾಂಶ ಹೊರಬಂದಿದ್ದು ಅಮಿತ್ ಮಿಶ್ರಾ ಔಟ್ ಎಂದು ನಿರ್ಧಾರಕ್ಕೆ ಬರಲಾಗಿತ್ತು. 
ಬ್ಯಾಟ್ಸ್ ಮನ್ ಗಳು ಪಿಚ್ ನ ಮಧ್ಯದಲ್ಲಿ ಓಡಬಾರದು ಎಂದು ನಿಯಮವಿದೆ. ಅಲ್ಲದೇ ಉದ್ದೇಶಪೂರ್ವಕವಾಗಿ ಔಟ್ ಆಗುವುದನ್ನು ತಪ್ಪಿಸಿಕೊಳ್ಳಲು ಪಿಚ್ ನ ಮಧ್ಯದಲ್ಲಿ ಓಡಿದರೇ ಅವರನ್ನು ಔಟ್ ಎಂದು ಘೋಷಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com