ಡೆಲ್ಲಿಯ ಚಾಂಪಿಯನ್ ಕನಸು ಭಗ್ನ, ಚೆನ್ನೈ ಸೂಪರ್ ಕಿಂಗ್ಸ್ ಗೆ 6 ವಿಕೆಟ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2019ನೇ ಆವೃತ್ತಿಯ ಅಂತಿಮ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ ಗಳಿಂದಮಣಿಸಿ ಫೈನಲ್ ಪ್ರವೇಶಿಸಿದೆ.

Published: 10th May 2019 12:00 PM  |   Last Updated: 10th May 2019 11:37 AM   |  A+A-


IPL 2019: Chennai Super Kings beat Delhi Capitals by 6 wickets

ಡೆಲ್ಲಿಯ ಚಾಂಪಿಯನ್ ಕನಸು ಭಗ್ನ, ಚೆನ್ನೈ ಸೂಪರ್ ಕಿಂಗ್ಸ್ ಗೆ 6 ವಿಕೆಟ್ ಜಯ

Posted By : RHN
Source : Online Desk
ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)2019ನೇ  ಆವೃತ್ತಿಯ ಅಂತಿಮ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಎಸ್ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ಇದರೊಡನೆ ಪ್ರಥಮ ಬಾರಿಗೆ ಫೈನಲ್ ಪ್ರವೇಶಿಸುವ ಡೆಲ್ಲಿಯ ಕನಸು ಕನಸಾಗಿಯೇ ಉಳಿದಿದೆ. ಇತ್ತ ಗೆಲುವು ಸಾಧಿಸಿರುವ ಚೆನ್ನೈ ಭಾನುವಾರ ನಡೆಯುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ರಿಷಬ್ ಪಂತ್ 38, ಶಿಖರ್ ಧವನ್ 18, ಕಾಲಿನ್ ಮುನ್ರೋ 27 ನಾಯಕ ಶ್ರೇಯಸ್ ಅಯ್ಯರ್ 13 ನೆರವಿನೊಡನೆ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು.

ಡೆಲ್ಲಿ ನೀಡಿದ್ದ ಅಲ್ಪ ಗುರಿಯನ್ನು ಬೆನ್ನತ್ತಿದ ಚೆನ್ನೈ ಫಾ ಡು ಪ್ಲೆಸಿಸ್(50)  ಹಾಗೂ ಶೇನ್ ವ್ಯಾಟ್ಸನ್ (50) lಅರ್ಧಶತಕ ಗಳು  ಅದನ್ನು ಗೆಲುವಿನ ತೀರ ತಲುಪಿಸಿದ್ದವು. 

ಚೆನ್ನೈನಲ್ಲಿ ಅಂಬಾಟಿ ರಾಯುಡು ಅಜೇಯ 20, ಸುರೇಶ್ ರೈನಾ 11 ರನ್ ಗಳಿಸಿದ್ದರು. ಇದರೊಡನೆ ಧೋನಿ ಬಳಗ 19 ಓವರ್‌ಗೆ 4 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಗೆಲುವಿನ ಶಿಖರವೇರಿದೆ.

ಹಾಲಿ ಚಾಂಪಿಯನ್ ಚೆನ್ನೈ ಐಪಿಎಲ್ ನಲ್ಲಿ ಆರನೇ ಬಾರಿ ಫೌಇನಲ್ ಗೆ ಪ್ರವೇಶಿಸಿದೆ.ಮೇ 12ರಂದು ಹೈದರಾಬಾದ್ ನ ರಾಜೀವ್ ಗಾಂಧೀ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್ 12ನೇ ಆವೃತ್ತಿಯ ಫೈನಲ್ ಹಣಾಹಣಿ ನಡೆಯಲಿದೆ.

Stay up to date on all the latest ಕ್ರಿಕೆಟ್ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp