ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಕೊಹ್ಲಿಗಿಲ್ಲ: ವಿರಾಟ್ ಬಾಲ್ಯದ ಕೋಚ್ ಬ್ಯಾನರ್ಜಿ

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರನಾಗಿರಬಹುದು, ಆದರೆ ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಆತನಿಗಿಲ್ಲ ಎಂದು ಕೊಹ್ಲಿ ಬಾಲ್ಯದ ಕ್ರಿಕೆಟ್ ಕೋಚ್ ಕೇಶಬ್ ರಂಜನ್ ಬ್ಯಾನರ್ಜಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರನಾಗಿರಬಹುದು, ಆದರೆ ಧೋನಿಗೆ ಇರುವ ಪಂದ್ಯ ಅವಲೋಕನಾ ಸಾಮರ್ಥ್ಯ ಆತನಿಗಿಲ್ಲ ಎಂದು ಕೊಹ್ಲಿ ಬಾಲ್ಯದ ಕ್ರಿಕೆಟ್ ಕೋಚ್ ಕೇಶಬ್ ರಂಜನ್ ಬ್ಯಾನರ್ಜಿ ಹೇಳಿದ್ದಾರೆ.
ಅಂಡುಲ್ ನಲ್ಲಿನ ಧೋನಿ ಕ್ರಿಕೆಟ್ ಅಕಾಡೆಮಿಯಲ್ಲಿ ಆಯೋಜನೆಯಾಗಿರುವ ಬೇಸಿಗೆ ಶಿಬಿರ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಶಬ್ ರಂಜನ್ ಬ್ಯಾನರ್ಜಿ ಅವರು, ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕೊಹ್ಲಿ ಕೆಲ ವಿಚಾರಗಳಲ್ಲಿ ಧೋನಿಯಷ್ಟು ಪಕ್ವವಾಗಿಲ್ಲ. ಪ್ರಮುಖವಾಗಿ ಪಂದ್ಯ ಅವಲೋಕನಾ ಸಾಮರ್ಥ್ಯದ ವಿಚಾರದಲ್ಲಿ ಧೋನಿ ದಿ ಬೆಸ್ಟ್ ಆಟಗಾರ. ಅದರಲ್ಲೂ ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ಹೆಣೆಯುವ ಯೋಜನೆ ಎಂತಹುದೇ ಬಲಿಷ್ಟ ಎದುರಾಳಿ ತಂಡವನ್ನಾದರೂ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಈ ಹಿಂದೆ ನಾವು ಸಾಕಷ್ಟು ಪಂದ್ಯಗಳಲ್ಲಿ ಇದನ್ನು ಗಮನಿಸಿದ್ದು, ಕೊಹ್ಲಿ ನಾಯಕನಾಗಿದ್ದರೂ, ಪಂದ್ಯದ ಅಂತಿಮ ಓವರ್ ಗಳಲ್ಲಿ ಧೋನಿ ನಿರ್ಧಾರವೇ ಅಂತಿಮವಾಗಿರುತ್ತದೆ. ಈ ಕುರಿತು ಕೊಹ್ಲಿ ಕೂಡ ಅವರ ನಿರ್ಧಾರವನ್ನು ಗೌರವಿಸುತ್ತಾರೆ ಮತ್ತು ಅದನ್ನು ಪಾಲಿಸುತ್ತಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಧೋನಿಯಿಂದ ಮಾತ್ರ ಕೊಹ್ಲಿ ಪರಿಪಕ್ವ ನಾಯಕನಾಗಬಲ್ಲ
ಇನ್ನು ಓರ್ವ ನಾಯಕನಾಗಿ ಕೊಹ್ಲಿ ಪಕ್ವವಾಗಲು ಧೋನಿಯ ಸಲಹೆ ಅಗತ್ಯವಿದೆ. ಕೊಹ್ಲಿಗೆ ಧೋನಿ ಒಬ್ಬರೇ ನೆರವಾಗಬಲ್ಲರು. ಕೊಹ್ಲಿ ಓರ್ವ ಅತ್ಯುತ್ತಮ ನಾಯಕನಾಗಿ ರೂಪುಗೊಳ್ಳಲು ಧೋನಿ ನೆರವು ಅತ್ಯಗತ್ಯ. ವಿಶ್ವಕಪ್ ಟೂರ್ನಿಯಲ್ಲಿ ಧೋನಿ ನೆರವು ಕೊಹ್ಲಿಗೆ ಅತ್ಯಗತ್ಯ. ಇದೇ ವೇಳೆ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಕುರಿತು ಮಾತನಾಡಿದ ಬ್ಯಾನರ್ಜಿ, ತಂಡದ ಮಧ್ಯಮ ಕ್ರಮಾಂಕ ಕೊಂಚ ದುರ್ಬಲವಾಗಿದೆ. ನಾಲ್ಕನೇ ಕ್ರಮಾಂಕದಲ್ಲಿ ಯಾವುದೇ ಸ್ಪೆಷಲಿಸ್ಟ್ ಬ್ಯಾಟ್ಸಮನ್ ಗಳಿಲ್ಲ. ಹೀಗಾಗಿ ನಂಬರ್ 4 ಸ್ಥಾನಕ್ಕೆ ಧೋನಿ ಅತ್ಯುತ್ತಮ ಆಯ್ಕೆ ಎಂದು ಹೇಳಿದ್ದಾರೆ.
ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ 2011ರಕ ವಿಶ್ವಕಪ್ ನಲ್ಲಿ ತಂಡ ಯಶಸ್ಸು ಸಾಧಿಸಿತ್ತು. ಹೀಗಾಗಿ ಧೋನಿ 4ರ ಸ್ಛಾನಕ್ಕೇ ಸೂಕ್ತ. ಐದು ಅಥವಾ 6ನೇ ಕ್ರಮಾಂಕದಲ್ಲಿ ಆಡಿದರೆ ತಂಡಕ್ಕೆ ಅಪಾಯ ಹೆಚ್ಚು ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com