'ಆರ್ಟ್ ಆಫ್ ರನ್ನಿಂಗ್'..!; ಬಿದ್ದು ಬಿದ್ದು ಓಡಿದ ಬ್ಯಾಟ್ಸಮನ್, ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

ಕ್ರಿಕೆಟ್ ನಲ್ಲಿ ಎಂತೆಂಥಾ ಹಾಸ್ಯ ಸನ್ನಿವೇಶಗಳು ಕಾಣಸಿಗುತ್ತವೆ. ಈ ಪಟ್ಟಿಗೆ ಇದೀಗ ಮತ್ತೊಂದು ದೃಶ್ಯ ಸೇರ್ಪಡೆಯಾಗಿದ್ದು, ಇಂಗ್ಲೆಂಡ್ ತಂಡದ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗರೊಬ್ಬರು ರನ್ ಕದಿಯಲು ಪಟ್ಟ ಹೆಣಗಾಟ ನೋಡಿ ಇದೀಗ ಇಂಟರ್ ನೆಟ್ ಲೋಕ ಬಿದ್ದು ಬಿದ್ದು ನಗುತ್ತಿದೆ.
ಮಾರ್ಕಸ್ ಟ್ರೆಸ್ಕೋಥಿಕ್ ಆರ್ಟ್ ಆಫ್ ರನ್ನಿಂಗ್
ಮಾರ್ಕಸ್ ಟ್ರೆಸ್ಕೋಥಿಕ್ ಆರ್ಟ್ ಆಫ್ ರನ್ನಿಂಗ್
ಲಂಡನ್: ಕ್ರಿಕೆಟ್ ನಲ್ಲಿ ಎಂತೆಂಹ ಹಾಸ್ಯ ಸನ್ನಿವೇಶಗಳು ಕಾಣಸಿಗುತ್ತವೆ. ಈ ಪಟ್ಟಿಗೆ ಇದೀಗ ಮತ್ತೊಂದು ದೃಶ್ಯ ಸೇರ್ಪಡೆಯಾಗಿದ್ದು, ಇಂಗ್ಲೆಂಡ್ ತಂಡದ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗರೊಬ್ಬರು ರನ್ ಕದಿಯಲು ಪಟ್ಟ ಹೆಣಗಾಟ ನೋಡಿ ಇದೀಗ ಇಂಟರ್ ನೆಟ್ ಲೋಕ ಬಿದ್ದು ಬಿದ್ದು ನಗುತ್ತಿದೆ.
ಹೌದು.. ಲಂಡನ್ ನಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಟೂರ್ನಿಯಲ್ಲಿ ಖ್ಯಾತ ಸೋಮರ್ ಸೆಟ್ ತಂಡ ಮತ್ತು ಸರ್ರೆ ತಂಡಗಳ ನಡುವಿನ ಪಂದ್ಯ ಇಂತಹುದೊಂದು ಹಾಸ್ಯಮಯ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಬ್ಯಾಟ್ಸಮನ್ ರನ್ ಗಾಗಿ ಪಟ್ಟ ಹರಸಾಹಸ ಇದೀಗ ಫುಲ್ ವೈರಲ್ ಆಗಿದೆ. ಇಷ್ಟಕ್ಕೂ ಹೀಗೆ ನಗೆಪಾಟಲಿಗೀಡಾದ ಆಟಗಾರ ಬೇರಾರು ಅಲ್ಲ. ಒಂದು ಕಾಲದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗದ ಬೆನ್ನೆಲುಬಾಗಿದ್ದ ಮಾರ್ಕಸ್ ಟ್ರೆಸ್ಕೋಥಿಕ್...
 ಸೋಮರ್ ಸೆಟ್ ತಂಡ ಮತ್ತು ಸರ್ರೆ ನಡುವಿನ ಪಂದ್ಯದಲ್ಲಿ ಸೋಮರ್ ಸೆಟ್ ಪರ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕಸ್ ಟ್ರೆಸ್ಕೋಥಿಕ್ ರನ್ ಗಾಗಿ ಓಡುವಾಗ ಕಾಲು ಜಾರಿ ಬಿದ್ದಿದ್ದಾರೆ. ಮೈದಾನದಲ್ಲಿ ಆಟಗಾರರು ಜಾರಿ ಬೀಳುವುದು ಸಾಮಾನ್ಯ. ಆದರೆ ಮಾರ್ಕಸ್ ಟ್ರೆಸ್ಕೋಥಿಕ್ ಒಂದಲ್ಲ ಎರಡೆರಡು ಬಾರಿ ಜಾರಿ ಬಿದ್ದು ನಗೆಪಾಟಲಿಗೀಡಾಗಿದ್ದಾರೆ. 
ಕ್ರೀಸ್ ನಲ್ಲಿದ್ದ ಬ್ಯಾಟ್ಸ್ ಮನ್ ಬಾಲ್ ಅನ್ನು ಮಿಡ್ ವಿಕೆಟ್ ನತ್ತ ಬಾರಿಸಿ ಮೂರು ರನ್ ಪಡೆಯಲು ಯತ್ನಿಸುತ್ತಾರೆ. ಈ ವೇಳೆ ನಾನ್ ಸ್ಟ್ರೈಕರ್ ನಲ್ಲಿದ್ದ ಟ್ರೆಸ್ಕೋಥಿಕ್ ಓಡಿ ಬಂದು ಇನ್ನೇನು ಕ್ರೀಸ್ ಮುಟ್ಟ ಬೇಕು ಎನ್ನುವಾಗ ಕಾಲು ಜಾರಿ ಬೀಳುತ್ತಾರೆ. ಅಷ್ಟು ಹೊತ್ತಿಗಾಗಲೇ ಮತ್ತೊಂದು ಬದಿಲ್ಲಿದ್ದ ಆಟಗಾರ 2ನೇ ಓಟಕ್ಕೆ ಕರೆ ನೀಡುತ್ತಾರೆ. ಜಾರಿ ಬಿದ್ದಿದ್ದ ಟ್ರೆಸ್ಕೋಥಿಕ್ ಸುಧಾರಿಸಿಕೊಂಡು 2ನೇ ರನ್ ಓಡುತ್ತಾರೆ. 2ನೇ ವೇಳೆ ಕ್ರೀಸ್ ಮುಟ್ಟುವಾಗ ಮತ್ತೆ ಟ್ರೆಸ್ಕೋಥಿಕ್ ಜಾರಿ ಬೀಳುತ್ತಾರೆ. ಆಗ ಮತ್ತೆ ಆಟಗಾರ 3ನೇ ರನ್ ಗೆ ಕರೆ ನೀಡುತ್ತಾರೆ. ಅಷ್ಟು ಹೊತ್ತಿಗೆ ಸಾಕು ಸಾಕಾಗಿ ಹೋಗಿದ್ದ ಟ್ರೆಸ್ಕೋಥಿಕ್ 3ನೇ ರನ್ ಕರೆಯನ್ನು ನಿರಾಕರಿಸಿ ನಾನು ಓಡುವುದಿಲ್ಲ, ನೀನು ಹಿಂದಕ್ಕೆ ಹೋಗು ಎಂಬಂತೆ ಸೂಚನೆ ನೀಡುತ್ತಾರೆ.
ಅಷ್ಟು ಹೊತ್ತಿಗಾಗಲೇ ಬಹುತೇಕ ಮೂರನೇ ರನ್ ನ ಮುಕ್ತಾಯದಲ್ಲಿದ್ದ ಆ ಬ್ಯಾಟ್ಸಮನ್ ಟ್ರೆಸ್ಕೋಥಿಕ್ ಪರಿಸ್ಥಿತಿ ನೋಡಿ ನಕ್ಕು ಮತ್ತೆ ವಾಪಸ್ ಆಗುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇದು ಮಾರ್ಕಸ್ ಟ್ರೆಸ್ಕೋಥಿಕ್ ಅವರ ರನ್ನಿಂಗ್ ಬಿಟ್ವೀನ್ ವಿಕೆಟ್ ನ ಸೀಕ್ರೆಟ್ ಎಂದು ಅವರ ಕಾಲೆಳೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com