ಡಿಆರ್‌ಎಸ್‌ನಲ್ಲಿ ಮತ್ತೇ ಚಾಣಾಕ್ಷತೆ ಮೆರೆದ ಧೋನಿ, ನಾಟೌಟ್ ತೀರ್ಪು ಬದಲಿಸಿದ ಅಂಪೈರ್, ವಿಡಿಯೋ ವೈರಲ್!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದರೇ ಕೆಲವೊಮ್ಮೆ ಅಂಪೈರ್ ಗಳು ಸಹ ತಡಬಡಾಯಿಸುತ್ತಾರೆ.
ಎಂಎಸ್ ಧೋನಿ
ಎಂಎಸ್ ಧೋನಿ
ವಿಶಾಖಪಟ್ಟಣಂ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದರೇ ಕೆಲವೊಮ್ಮೆ ಅಂಪೈರ್ ಗಳು ಸಹ ತಡಬಡಾಯಿಸುತ್ತಾರೆ. ಹೌದು, ಚಾಣಾಕ್ಷ ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದಾಗ ಅಂಪೈರ್ ನಾಟೌಟ್ ತೀರ್ಪು ಔಟಾಗಿ ಬದಲಾಗಿದ್ದೇ ಜಾಸ್ತಿ. ಅಂತೇ ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಸಹ ಇದೇ ರೀತಿ ಘಟನೆ ನಡೆಯಿತು.
ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಕ್ವಾಲಿಫೆಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಮೊದಲು ಡೆಲ್ಲಿ ಬ್ಯಾಟಿಂಗ್ ಮಾಡಿದ್ದು ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಪೃಥ್ವಿ ಶಾ ಚಹಾರ್ ಎಸೆತದಲ್ಲಿ ಸ್ಫೋಟಕ ಬ್ಯಾಟಿಂಗ್ ಗೆ ಮುಂದಾದರೂ ಆದರೆ ಚೆಂಡು ಬ್ಯಾಟ್ ಗೆ ಮಿಸ್ಸಾಗಿ ಕಾಲಿಗೆ ಬಡಿದಿತ್ತು. 
ಈ ವೇಲೆ ಚಹಾಲ್ ಹಾಗೂ ಧೋನಿ ಇಬ್ಬರು ಔಟ್ ಗೆ ಅಪೀಲ್ ಮಾಡಿದರು. ಆದರೆ ಅಂಪೈರ್ ನಾಟೌಟ್ ನೀಡಿದ್ದರಿಂದ ಎಂಎಸ್ ಧೋನಿ ಡಿಆರ್‌ಎಸ್‌ಗೆ ಮನವಿ ಮಾಡಿದರು. ಅಂತೇ ಡಿಆರ್‌ಎಸ್‌ನಲ್ಲಿ ಔಟ್ ಆಗಿರವುದು ಕಂಡು ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು. 
ಒಟ್ಟಿನಲ್ಲಿ ಎಂಎಸ್ ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದರೆ ಅದರಲ್ಲಿ ಶೇಖಡ 90ರಷ್ಟು ಔಟ್ ತೀರ್ಪು ಬಂದಿದೆ. 
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಚೆನ್ನೈ ಫೈನಲ್ ಪ್ರವೇಶಿಸಿದ್ದು ಮೇ 12ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com