ಐಪಿಎಲ್ 2019 ಫೈನಲ್: 1 ರನ್ ನಿಂದ ಮುಂಬೈ ಇಂಡಿಯನ್ಸ್ ಗೆಲುವು, 4ನೇ ಬಾರಿ ಪ್ರಶಸ್ತಿಯ ಗರಿ

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ 2019 ಐಪಿಎಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 1 ರನ್ ಗಳ ಅಂತರದಿಂದ ಸಿಎಸ್ ಕೆ ವಿರುದ್ಧ ಗೆಲುವು ಸಾಧಿಸಿದೆ
ವ್ಯಾಟ್ಸನ್
ವ್ಯಾಟ್ಸನ್

ಹೈದ್ರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ 2019 ಐಪಿಎಲ್ ಚಾಂಪಿಯನ್ ಶಿಪ್  ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ  1  ರನ್ ಗಳ ಅಂತರದಿಂದ  ಸಿಎಸ್ ಕೆ ವಿರುದ್ಧ ಗೆಲುವು ಸಾಧಿಸಿದ್ದು, ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು  ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ  ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ಗಳಲ್ಲಿ  8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ, ಚೆನ್ನೈ ಸೂಪರ್ ಕಿಂಗ್ಸ್  ಗೆಲ್ಲಲು 150 ರನ್ ಗಳ ಗುರಿ ನೀಡಿತ್ತು. ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ಡಿ ಕಾಕ್ 29 ರನ್ ಗಳಿಸಿದರೆ ಕಿರಿನ್ ಪೊಲಾರ್ಡ್  41 ರನ್ ಗಳಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಪರ ದೀಪರ್ ಚಾಹರ್ ಮೂರು ವಿಕೆಟ್ ಪಡೆದರೆ, ಶಾರ್ದೂಲ್ ಠಾಕೂರ್ ಮತ್ತು ಇಮ್ರಾನ್ ತಹಿರ್ ತಲಾ 2 ವಿಕೆಟ್ ಪಡೆದುಕೊಂಡರು.  

ಮುಂಬೈ ನೀಡಿದ 150 ರನ್ ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ  ನಿಗದಿತ  ಓವರ್ ಗಳಲ್ಲಿ  6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಶಕ್ತವಾಯಿತು.

ಚೆನ್ನೈ ಪರ ಅಬ್ಬರದ ಆಟ ಪ್ರದರ್ಶಿಸಿದ ವ್ಯಾಟ್ಸನ್  80 ರನ್ ಗಳಿಸಿದರೆ, ಎಫ್ ಡು ಪ್ಲೆಸಿಸ್  26,  ಸುರೇಶ್ ರೈನಾ 8, ಅಂಬಟ್ಟಿ ರಾಯುಡು 1, ನಾಯಕ ಧೋನಿ ಕೇವಲ 2 ರನ್ ಗಳಿಸುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಕಡೆಯವರೆಗೂ ಛಲದಂಕಮಲ್ಲನಂತೆ  ಹೋರಾಟ ನಡೆಸುತ್ತಿದ್ದ ವ್ಯಾಟ್ಸನ್  ಸಿಎಸ್ ಕೆ ಗೆ  ಎರಡು ಎಸೆತಗಳಲ್ಲಿ ನಾಲ್ಕು ರನ್ ಬೇಕಿದ್ದಾಗ ರನ್ ಔಟ್ ಆದರು. ಇದು  ಧೋನಿ ಪಡೆಗೆ ದುಬಾರಿಯಾಗಿ ಪರಿಣಮಿಸಿತು. ಪರಿಣಾಮ ಒಂದು ರನ್ ಗಳ ಅಂತರದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com