ಐಪಿಎಲ್ ಫೈನಲ್ ಖುಲಾಯಿಸಿದ ಹಾಟ್ ಸ್ಟಾರ್ ಅದೃಷ್ಟ, ದಾಖಲೆಯ ವೀಕ್ಷಕರ ಸಂಖ್ಯೆ

ಐಪಿಎಲ್ ಫೈನಲ್ ಪಂದ್ಯದ ಮೂಲಕ ಖ್ಯಾತ ಓವರ್ ದ ಟಾಪ್ ಮೀಡಿಯಾ ಸರ್ವಿಸ್ ಆ್ಯಪ್ (ಒಟಿಟಿ) ಹಾಟ್ ಸ್ಟಾರ್ ಅದೃಷ್ಟ ಖುಲಾಯಿಸಿದ್ದು, ಇದೀಗ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದ ಮೊದಲ ಆ್ಯಪ್ ಎಂಬ ಕೀರ್ತಿಗೆ ಭಾಜನವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಐಪಿಎಲ್ ಫೈನಲ್ ಪಂದ್ಯದ ಮೂಲಕ ಖ್ಯಾತ ಓವರ್ ದ ಟಾಪ್ ಮೀಡಿಯಾ ಸರ್ವಿಸ್ ಆ್ಯಪ್ (ಒಟಿಟಿ) ಹಾಟ್ ಸ್ಟಾರ್ ಅದೃಷ್ಟ ಖುಲಾಯಿಸಿದ್ದು, ಇದೀಗ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದ ಮೊದಲ ಆ್ಯಪ್ ಎಂಬ ಕೀರ್ತಿಗೆ ಭಾಜನವಾಗಿದೆ.
ಹೌದು.. ಕಳೆದ ಭಾನುವಾರ ಮುಕ್ತಾಯವಾದ ಐಪಿಎಲ್ ಫೈನಲ್ ಪಂದ್ಯದ ಮೂಲಕ ಖ್ಯಾತ ಮೊಬೈಲ್ ವಿಡಿಯೋ ಆ್ಯಪ್ ಹಾಟ್ ಸ್ಟಾರ್ ನ ರೇಟಿಂಗ್ಸ್ ಆಗಸಕ್ಕೇರಿದ್ದು, ಒಂದೇ ದಿನದಲ್ಲಿ ಹಾಟ್ ಸ್ಟಾರ್ ಅತೀ ಹೆಚ್ಚು ವೀಕ್ಷಕರನ್ನು ಸೆಳೆದ ಆ್ಯಪ್ ಎಂಬ ಕೀರ್ತಿಗೆ ಭಾಜನವಾಗಿದೆ.
ಮೂಲಗಳ ಪ್ರಕಾರ ಕಳೆದ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಫೈನಲ್ ಪಂದ್ಯ ಅತ್ಯಂತ ಹೆಚ್ಚು ವೀಕ್ಷಕರನ್ನು ಸೆಳೆದಿದ್ದು, ಜಾಗತಿಕವಾಗಿ ಈ ಪಂದ್ಯವನ್ನು ಹಾಟ್ ಸ್ಟಾರ್ ಆ್ಯಪ್ ನಲ್ಲಿ ಬರೊಬ್ಬರಿ 18.6 ಮಿಲಿಯನ್ ಮಂದಿ ರಿಜಿಸ್ಟರ್ ಮಾಡಿಕೊಂಡು ವೀಕ್ಷಣೆ ಮಾಡಿದ್ದಾರೆ. ಆ ಮೂಲರ ಜಾಗತಿಕ ಮಟ್ಟದಲ್ಲಿ ಇಷ್ಟು ಪ್ರಮಾಣದ ವೀಕ್ಷಕರನ್ನು ಹೊಂದಿದ ಮೊದಲ ಆ್ಯಪ್ ಎಂಬ ಕೀರ್ತಿಗೂ ಹಾಟ್ ಸ್ಟಾರ್ ಭಾಜನವಾಗಿದೆ.
ಇದೇ ಟೂರ್ನಮೆಂಟ್ ನ ಈ ಹಿಂದಿನ ಪಂದ್ಯ ಅಂದರೆ ಸಿಎಸ್ ಕೆ ಮತ್ತು ಡೆಲ್ಲಿ ನಡುವಿನ ಪಂದ್ಯ ಕೂಡ ದಾಖಲೆ ಬರೆದಿತ್ತು. ಈ ಪಂದ್ಯವನ್ನು ಸುಮಾರು 12.7 ಮಿಲಿಯನ್ ಮಂದಿ ಹಾಟ್ ಸ್ಟಾರ್ ನಲ್ಲಿ ವೀಕ್ಷಣೆ ಮಾಡಿದ್ದರು. ಇದೀಗ ಫೈನಲ್ ಪಂದ್ಯದ ಮೂಲಕ ಹಾಟ್ ಸ್ಟಾರ್ ತನ್ನದೇ ದಾಖಲೆಯನ್ನು ಹಿಂದಿಕ್ಕಿದೆ.
ಇನ್ನು ಟೂರ್ನಮೆಂಟ್ ಗೂ ಮುನ್ನ ಹಾಟ್ ಸ್ಟಾರ್ ಟೂರ್ನಿ ಮೂಲಕ 300 ಮಿಲಿಯನ್ ವೀಕ್ಷಕರನ್ನು ಹೊಂದುವ ಗುರಿ ಹೊಂದಿತ್ತು. ಆದರೆ ಟೂರ್ನಮೆಂಟ್ ಅಂತ್ಯದ ಹೊತ್ತಿಗೆ ಕೇವಲ 300 ಮಿಲಿಯನ್ ವೀಕ್ಷಕರನ್ನು ಮಾತ್ರವಲ್ಲದೇ ತನ್ನ ವಾಚ್ ಟೈಮ್ ಪ್ರಮಾಣವನ್ನೂ ಒಂದೇ ವರ್ಷದಲ್ಲಿ ಶೇ.74ರಷ್ಟು ಏರಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹಾಟ್ ಸ್ಟಾರ್ ಸಂಸ್ಛೆಯ ಮುಖ್ಯಸ್ಥ ವರುಣ್ ನಾರಂಗ್ ಅವರು, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಾವು ಈ ಸಾಧನೆಗೈದಿದ್ದೇವೆ. ತಂತ್ರಜ್ಞಾನವೇ ನಮ್ಮ ಬೆನ್ನೆಲುಬಾಗಿತ್ತು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವೀಕ್ಷಕರಿಗೆ ಪಂದ್ಯ ತಲುಪಿಸುವ ಕೆಲಸ ಮಾಡಿದ್ದೆವು. ನಮ್ಮ ಪ್ರಯತ್ನಕ್ಕೆ ವೀಕ್ಷಕರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು. ನಾವು ಜಾಗತಿಕ ದಾಖಲೆ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದ್ದಾರೆ.
'ಕೆಲಸದಲ್ಲಿ ಬಿಸಿಯಾಗಿರುವ ಮಂದಿಗೂ ಕೂಡ ಕೈ ಬೆರಳ ತುದಿಯಲ್ಲಿ ಹಾಟ್ ಸ್ಟಾರ್ ಮೂಲಕ ಪಂದ್ಯ ವೀಕ್ಷಿಸುವ ಅವಕಾಶ ದೊರೆಯಿತು. ಅಂತೆಯೇ ಸಂಸ್ಥೆ ಕೂಡ 'ಕೋಯಿಯಾರ್ ನಹಿ ಫಾರ್' ಅಭಿಯಾನದ ಮೂಲದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ಸೆಳೆಯುವ ಪ್ರಯತ್ನ ಮಾಡಿತು. ಅಂತೆಯೇ ಅವರಿರುವ ಸ್ಥಳದಿಂದಲೇ ಪಂದ್ಯ ವೀಕ್ಷಣೆ ಮಾಡುವ ಸವಲತ್ತು ಕ್ರಿಕೆಟ್ ಪ್ರೇಮಿಗಳಿಗೆ ಇಷ್ಟವಾಗಿತ್ತು. ಅಂತೆಯೇ ಆ್ಯಪ್ ನಲ್ಲಿನ ವಾಚ್ ಎ ಪ್ಲೇ ಕ್ವಿಜ್ ಕಾರ್ಯಕ್ರಮದಲ್ಲಿ ಐಪಿಎಲ್ ಕುರಿತ ಪ್ರಶ್ನೆ ಮತ್ತು ಉತ್ತರ ಕೂಡ ವೀಕ್ಷಕರಿಗೆ ಇಷ್ಟವಾಗಿತ್ತು. ಸಂಸ್ಥೆ ನೀಡಿರುವ ದತ್ತಾಂಶಗಳ ಅನ್ವಯ ಸುಮಾರು 64.4 ಮಿಲಿಯನ್ ಮಂದಿ ಈ ವಾಚ್ ಎನ್ ಪ್ಲೇ ಕ್ಲಿಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಳೆದ ಮಾರ್ಚ್ 23ರಿಂದ ಆರಂಭವಾಗಿದ್ದ ಐಪಿಎಲ್ ಟೂರ್ನಿಯು ಒಟ್ಟು ಭಾಷೆಗಳಲ್ಲಿ ಪ್ರಸಾರವಾಗಿತ್ತು. ಒಟ್ಟು 7 ವಾರಗಳ ಕಾಲ ನಡೆದ ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 60 ಪಂದ್ಯಗಳು ನಡೆದಿದ್ದವು. ಇದೀಗ ಐಪಿಎಲ್ ಯಶಸ್ಸಿನ ಶಿಖರವನ್ನೇರಿರುವ ಹಾಟ್ ಸ್ಟಾರ್ ಇದೀಗ ಐಸಿಸಿ ವಿಶ್ವಕಪ್ ಟೂರ್ನಿಯ ಪ್ರಸಾರಕ್ಕೆ ಸಿದ್ದತೆ ಆರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com