ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡಗಳ ಪಟ್ಟಿಯಲ್ಲಿ ಪಾಕ್..!, ದಾದಾ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಬಾರಿ ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ ಕೂಡ ಇದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಈ ಬಾರಿ ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ ಕೂಡ ಇದೆ ಎಂದು  ಹೇಳಿ ಅಚ್ಚರಿ ಮೂಡಿಸಿದ್ದಾರೆ.
ವಿಶ್ವಕಪ್ ಮಹಾ ಸಮರ ಆರಂಭಕ್ಕೆ ಇನ್ನೂ ಕೇವಲ 15 ದಿನಗಳ ಮಾತ್ರ ಬಾಕಿ ಇದ್ದು, ಎಲ್ಲ ತಂಡಗಳು ವಿಶ್ವಕಪ್ ಟೂರ್ನಿ ನಡೆಯಲಿರುವ ಇಂಗ್ಲೆಂಡ್ ನತ್ತ ಪ್ರಯಾಣಕ್ಕೆ ಸಿದ್ಧತೆ ನಡೆಸಿವೆ. ಏತನ್ಮಧ್ಯೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದು, ಈ ಬಾರಿ ವಿಶ್ವಕಪ್ ಗೆಲ್ಲುವ ತಮ್ಮ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಪಾಕಿಸ್ತಾನ ಕೂಡ ಇದೆ ಎಂದು  ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗಂಗೂಲಿ, ಇಂಗ್ಲೆಂಡ್ ನಡೆದ ಪ್ರತೀ ವಿಶ್ವಕಪ್ ಟೂರ್ನಿಯಲ್ಲೂ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ತೋರಿದೆ. ಕೇವಲ ವಿಶ್ವಕಪ್ ಮಾತ್ರವಲ್ಲ ಇಂಗ್ಲೆಂಡ್ ನಲ್ಲಿ ಐಸಿಸಿ ಆಯೋಜಿಸಿದ ಎಲ್ಲ ಪ್ರಮುಖ ಟೂರ್ನಿಗಳಲ್ಲೂ ಪಾಕಿಸ್ತಾನದ ಪ್ರದರ್ಶನ ಉತ್ತಮವಾಗಿತ್ತು. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ  ಆ ತಂಡ ಭಾರತವನ್ನು 180 ರನ್ ಗಳ ಅಂತರಗಲ್ಲಿ ಮಣಿಸಿತ್ತು, 2009ರಲ್ಲಿ ವಿಶ್ವ ಟಿ20 ಚಾಂಪಿಯನ್ ಆಗಿತ್ತು ಎಂದು ಹೇಳಿದ್ದಾರೆ.
ಅಂತೆಯೇ ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನ ತೋರಿದ್ದ ಪ್ರದರ್ಶನವನ್ನು ಶ್ಲಾಘಿಸಿದ ದಾದಾ, ಇಂಗ್ಲೆಂಡ್ ನೀಡಿದ 375 ರನ್ ಗಳ ಬೃಹತ್ ಮೊತ್ತದ ಹೊರತಾಗಿಯೂ ಪಾಕಿಸ್ತಾನ ಕೇವಲ 12 ರನ್ ಗಳ ಅಂತರದಲ್ಲಿ ಆ ಪಂದ್ಯ ಸೋತಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಬರಬಹುದಾದ ತಂಡಗಳ ಪಟ್ಟಿ ಮಾಡಿದ ದಾದಾ, ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಸೆಮಿಸ್ ನಲ್ಲಿ ಕಾಣಿಸಿಕೊಂಡರೆ ಅಚ್ಚರಿ ಏನಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಕೊಹ್ಲಿ ಅಂಡ್ ಟೀಂ ಬಗ್ಗೆ ಮಾತನಾಡಿರುವ ದಾದಾ, ಪಾಕಿಸ್ತಾನವಾಗಲಿ ಅಥವಾ ಇನ್ನಾವುದೇ ತಂಡವಾಗಲಿ ಭಾರತ ತಂಡ ಒತ್ತಡಕ್ಕೆ ಒಳಗಾಗುವ ಅಗತ್ಯವಿಲ್ಲ. ಏಕೆಂದರೆ ಹಾಲಿ ಟೀಂ ಇಂಡಿಯಾ ಬಲಿಷ್ಟವಾಗಿದ್ದು, ಯಾವುದೇ ತಂಡ ಕೂಡ ಟೀಂ ಇಂಡಿಯಾವನ್ನು ಮಣಿಸಲು ಕಷ್ಟ ಸಾಧ್ಯ. ಕೊಹ್ಲಿ, ಧವನ್, ಧೋನಿ, ರೋಹಿತ್ ಶರ್ಮಾ ರಂತಹ ಆಟಗಾರರಿರುವಾಗ ತಂಡ ದುರ್ಬಲವಾಗಲು ಹೇಗೆ ಸಾಧ್ಯ ಎಂದು ಗಂಗೂಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com