ವಿಶ್ವಕಪ್‌ಗೆ ಕೊನೆಯ ಅವಕಾಶ: ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ ಗ್ಲೇಯ್ ಮೊರೆ!

ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಯೂನಿವರ್ಸಸ್ ಬಾಸ್ ಎಂದು ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಇದೀಗ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ...
ಕ್ರಿಸ್ ಗೇಯ್ಲ್
ಕ್ರಿಸ್ ಗೇಯ್ಲ್
ನವದೆಹಲಿ: ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಯೂನಿವರ್ಸಸ್ ಬಾಸ್ ಎಂದು ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಇದೀಗ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ ಮೊರೆ ಹೋಗಿದ್ದಾರೆ.
ಕ್ರಿಸ್ ಗೇಯ್ಲ್ ವಿಶ್ವಕಪ್ ಗೆ ಆಯ್ಕೆಯಾಗಿದ್ದು ಇದು ಅವರ ಐದನೇ ಹಾಗೂ ಕೊನೆಯ ವಿಶ್ವಕಪ್ ಅವಕಾಶ ಪಡೆದಿದ್ದಾರೆ. 39 ಹರೆಯದ ಕ್ರಿಸ್ ಗೇಯ್ಲ್ ಜಿಮ್ ನಲ್ಲಿ ವರ್ಕೌಟ್ ಮಾಡಿದರೆ ಅದು ಕೇವಲ ದೇಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಫಿಟ್ನೆಸ್ ಜೊತೆಗೆ ಮನೋಬಲವು ಮುಖ್ಯವಾಗಿರುತ್ತದೆ ಎಂದು ಅರಿತ ಗೇಯ್ಲ್ ಇದೀಗ ಯೋಗದ ಮೊರೆ ಹೋಗಿದ್ದಾರೆ.
ತಮ್ಮ ಮನೋಬಲವನ್ನು ವೃದ್ಧಿಸಿಕೊಳ್ಳಲು ನೈಸರ್ಗಿಕವಾಗಿ ಬಲವಾಗಲು ಯೋಗ ಅತ್ಯುತ್ತಮ ಉಪಾಯ ಎಂದು ಗೇಯ್ಲ್ ಯೋಗ ಮಾಡಲಿದ್ದಾರೆ. ಪ್ರಸ್ತುತ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ಕ್ರಿಸ್ ಗೇಯ್ಲ್ 41ರ ಸರಾಸರಿಯಲ್ಲಿ 490 ರನ್ ಪೇರಿಸಿದ್ದರು. 
ಇಂಗ್ಲೆಂಡ್ ನಲ್ಲಿ ಜೂನ್ 30ರಿಂದ ಐಸಿಸಿ ಟೂರ್ನಿ ಆರಂಭಗೊಳ್ಳಲಿದ್ದು ಗೇಯ್ಲ್ ಆಡಿದ್ದ ನಾಲ್ಕು ವಿಶ್ವಕಪ್ ಟೂರ್ನಿಯಲ್ಲೂ ಗೆಲುವ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದು ಗೇಯ್ಲ್ ಗೆ ಐದನೇ ಹಾಗೂ ಕೊನೆಯ ವಿಶ್ವಕಪ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com