ಕೊಹ್ಲಿ ರೀತಿ ಬ್ಯಾಟಿಂಗ್ ಸ್ಟೈಲ್: ವಿರಾಟ್ ರನ್ನು ಮೀರಿಸುತ್ತಾರಾ ಈ ಪಾಕ್ ಕ್ರಿಕೆಟಿಗ, ವಿಡಿಯೋ ವೈರಲ್!

ಟೀಂ ಇಂಡಿಯಾದ ನಾಯಕ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂತಹದರಲ್ಲಿ ಪಾಕ್...
ವಿರಾಟ್ ಕೊಹ್ಲಿ-ಉಸಾಮಾ ಬಲೂಚ್
ವಿರಾಟ್ ಕೊಹ್ಲಿ-ಉಸಾಮಾ ಬಲೂಚ್
ಟೀಂ ಇಂಡಿಯಾದ ನಾಯಕ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಇಂತಹದರಲ್ಲಿ ಪಾಕ್ ಆಟಗಾರನೊಬ್ಬ ಕೊಹ್ಲಿಯಂತೆ ಬ್ಯಾಟಿಂಗ್ ಮಾಡುತ್ತಿದ್ದು ಹಲವು ಅಭಿಮಾನಿಗಳನ್ನು ತಮ್ಮತ್ತ ಆಕರ್ಷಿಸುತ್ತಿದ್ದಾರೆ.
ಪಾಕಿಸ್ತಾನದ 18 ವರ್ಷದ ಉಸಾಮಾ ಬಲೂಚ್ ಕೊಹ್ಲಿಯಂತೆ ಬ್ಯಾಟ್ ಬೀಸುತ್ತಿದ್ದಾರೆ. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಎದುರು ನೋಡುತ್ತಿರುವ ಉಸಾಮಾ ಬೀಸುವುದನ್ನು ನೋಡಿದರೆ ಒಂದು ಕ್ಷಣ ವಿರಾಟ್ ಕೊಹ್ಲಿ ಕಣ್ಣು ಮುಂದೆ ಬರುತ್ತಾರೆ.
ಉಸಾಮಾ ವಿರಾಟ್ ಕೊಹ್ಲಿಯ ಕವರ್ ಶಾಟ್ ನ ಪ್ರತಿರೂಪವೆಂಬಂತೆ ಚೆಂಡನ್ನು ಬೌಂಡರಿಗಟ್ಟುವ ಚಾಕುಚಕ್ಯತೆ ಪಡೆದಿದ್ದಾರೆ. ಉಸಾಮಾ ಆಟ ದೂರದಿಂದ ನೋಡುವವರಿಗೆ ಕೊಹ್ಲಿಯ ಬ್ಯಾಟಿಂಗ್ ಶೈಲಿ ಕಾಣಿಸುವುದರಲ್ಲಿ ಸಂಶಯವೇ ಇಲ್ಲ. 
ಕರಾಚಿ ಪ್ರಿಮಿಯರ್ ಲೀಗ್ ನ ಜೋಹರ್ ಬಿಯರ್ಸ್ ಪರವಾಗಿ ಉಸಾಮಾ ಆಡುತ್ತಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ 39 ಎಸೆತಗಳಲ್ಲಿ 69 ರನ್ ಪೇರಿಸುವ ಮೂಲಕ ಭರವಸೆ ಮೂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com