ಬೆಳಗಾವಿ ಕ್ರೀಡಾಂಗಣ
ಬೆಳಗಾವಿ ಕ್ರೀಡಾಂಗಣ

ಸಿಹಿ ಸುದ್ದಿ: ಮೇ 25ಕ್ಕೆ ಬೆಳಗಾವಿ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ

ರಾಜ್ಯದ ಎರಡನೇ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಕುಂದಾ ನಗರಿ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ....
ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಕುಂದಾ ನಗರಿ ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ಸಿದ್ಧಗೊಂಡಿದ್ದು, ಇನ್ನು ಮುಂದೆ ಕ್ರೀಡಾ ಕ್ಷೇತ್ರದಲ್ಲೂ ಮಿಂಚಲಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ()ಕೆಎಸ್ ಸಿಎ) ಬೆಳಗಾವಿಯ ಆಟೋನಗರದ ಗೋಕಾಕ ರಸ್ತೆಯಲ್ಲಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಪಂದ್ಯ ಆಯೋಜಿಸಲಾಗಿದ್ದು, ಮೇ 25ರಿಂದ ಜೂನ್ 10ರ ವರೆಗೆ ಭಾರತ-ಎ ತಂಡ ಹಾಗೂ ಶ್ರೀಲಂಕಾ- ಎ ತಂಡದ ನಡುವೆ ಮೂರು ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯ ಆಡಲಿವೆ.
ಭಾರತದ ಪ್ರವಾಸದಲ್ಲಿರುವ ಶ್ರೀಲಂಕಾ ತಂಡ ಒಟ್ಟು ಎರಡು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳನ್ನು ಆಡುತ್ತಿದ್ದು, ಮೊದಲ ಟೆಸ್ಟ್ ಪಂದ್ಯ ಮೇ 25ರಿಂದ ಮೇ 28ರ ವರೆಗೆ ಬೆಳಗಾವಿಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಮೇ 31ರಿಂದ ಜೂನ್ 3 ರ ವರೆಗೆ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐದು ಏಕದಿನ ಪಂದ್ಯಗಳಲ್ಲಿ ಮೂರು ಪಂದ್ಯಗಳು ಜೂನ್ 6, 8 ಮತ್ತು 10ರಂದು ಬೆಳಗಾವಿಯಲ್ಲಿ ಹಾಗೂ ಎರಡು ಪಂದ್ಯಗಳು ಜೂನ್ 14 ಮತ್ತು 15ರಂದು ಹುಬ್ಬಳ್ಳಿಯಲ್ಲಿ ನಡೆಲಿವೆ.
ಬೆಳಗಾವಿಯಲ್ಲಿ ಮೊದಲ ಬಾರಿಗೆ ಪುರುಷರ ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರುವುದರಿಂದ ಬಿಸಿಸಿಐ ತಂಡ ಈಗಾಗಲೇ ಕುಂದಾ ನಗರಿಗೆ ಭೇಟಿ ನೀಡಿ, ಪಿಚ್, ಭದ್ರತೆ ಹಾಗೂ ಇತರೆ ಸೌಲಭ್ಯಗಳನ್ನು ಪರಿಶೀಲಿಸಿದೆ ಎಂದು ಕ್ಯೂರೆಟರ್ ದೀಪಕ್ ಪವಾರ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಈ ಕ್ರೀಡಾಂಗಣದಲ್ಲಿ 2017ರಲ್ಲಿ ಮಹಿಳಾ ಅಂತರಾಷ್ಟ್ರೀಯ ಪಂದ್ಯಗಳು ಹಾಗೂ ಇತ್ತೀಚಿಗೆ ಕರ್ನಾಟಕ ಮತ್ತು ಮುಂಬೈ ನಡುವೆ ರಣಜಿ ಪಂದ್ಯಗಳು ನಡೆದಿವೆ. ಆದರೆ ಪುರುಷರ ಅಂತರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದು ಇದೆ ಮೊದಲು.

Related Stories

No stories found.

Advertisement

X
Kannada Prabha
www.kannadaprabha.com