ವಿಶ್ವಕಪ್​ ವಿಜೇತ ತಂಡಕ್ಕೆ ಸಿಗಲಿದೆ 28 ಕೋಟಿ ರು. ಬಹುಮಾನ, ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ

ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್​​​ ತವರು ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ​ ಅದ್ಧೂರಿಯಾಗಿ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್​​​ ತವರು ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ​ ಅದ್ಧೂರಿಯಾಗಿ ನಡಯಲಿದೆ. 
ಈ ಮಧ್ಯೆ ಐಸಿಸಿ ಈ ಬಾರಿಯ ವಿಶ್ವಕಪ್​ ಪ್ರಶಸ್ತಿ ಮೊತ್ತವನ್ನು ಪರಿಷ್ಕರಿಸಿದ್ದು, ವಿಶ್ವಕಪ್​ ಫೈನಲ್​ ಪ್ರವೇಶಿಸಿ ಗೆಲುವು ಸಾಧಿಸುವ ತಂಡಕ್ಕೆ 4 ಮಿಲಿಯನ್​ ಡಾಲರ್​(28 ಕೋಟಿ ರು.) ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತಿದೆ. ಇದುವರೆಗೂ ನಡೆದ ವಿಶ್ವಕಪ್​ ಟೂರ್ನಿಯಲ್ಲೇ ಅತ್ಯಧಿಕ ಬಹುಮಾನ ಮೊತ್ತ ಇದಾಗಲಿದೆ.
ಐಸಿಸಿ ಇಂದು ವಿಶ್ವಕಪ್ ಬಹುಮಾನದ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 10 ಮಿಲಿಯನ್​ ಡಾಲರ್​(70 ಕೋಟಿ ರೂ.) ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತಿದೆ. 
ವಿಶ್ವಕಪ್ ಚಾಂಪಿಯನ್ ಆಗುವ ತಂಡಕ್ಕೆ 4 ಮಿಲಿಯನ್​ ಡಾಲರ್​(28 ಕೋಟಿ ರೂ.), ರನ್ನರ್​ ಅಪ್​ಗೆ 2 ಮಿಲಿಯನ್​ ಡಾಲರ್​​(​14 ಕೋಟಿ ರೂ.), ಸೆಮಿಫೈನಲ್​ನಲ್ಲಿ ಸೋತ ತಂಡಕ್ಕೆ 800,000 ಡಾಲರ್​(5.6ಕೋಟಿ ರೂ.) ಬಹುಮಾನ ಮೊತ್ತವನ್ನು ನೀಡಲಾಗುತ್ತದೆ.
ಈ ಬಾರಿ ಲೀಗ್​ ಹಂತದ ಪಂದ್ಯದಲ್ಲಿ ಗೆಲ್ಲುವ 10 ತಂಡಗಳಿಗೂ ಬಹುಮಾನ ಸಿಗುತ್ತಿರುವುದು ಈ ವಿಶ್ವಕಪ್ ಟೂರ್ನಿಯ ವಿಶೇಷವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com