ವಿಶ್ವಕಪ್: ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ: ಕೆಎಲ್ ರಾಹುಲ್!

ವಿಶ್ವಕಪ್ ಮಹಾಸಮರಕ್ಕೆ ಅದಾಗಲೇ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಆದರೆ ಭಾರತಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಮಸ್ಯೆ ಈಗಲು ಕಗ್ಗಂಟಾಗಿದೆ.

Published: 18th May 2019 12:00 PM  |   Last Updated: 18th May 2019 01:55 AM   |  A+A-


KL Rahul

ಕೆಎಲ್ ರಾಹುಲ್

Posted By : VS VS
Source : Online Desk
ನವದೆಹಲಿ: ವಿಶ್ವಕಪ್ ಮಹಾಸಮರಕ್ಕೆ ಅದಾಗಲೇ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಆದರೆ ಭಾರತಕ್ಕೆ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಮಸ್ಯೆ ಈಗಲು ಕಗ್ಗಂಟಾಗಿದೆ. ಆದರೆ ನಾನು ಯಾವುದೇ ಕ್ರಮಾಂಕದಲ್ಲೂ ಆಡಲು ಸಿದ್ಧ ಎಂದು ಕೆಎಲ್ ರಾಹುಲ್ ಅವರು ಹೇಳಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕೆಎಲ್ ರಾಹುಲ್ ಅವರು, ಇಂಗ್ಲೆಂಡ್ ಪಿಚ್ ಕಂಡಿಷನ್ ಮೇಲೆ ತಂಡದ ಆಟಗಾರರ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸಲಾಗುತ್ತದೆ ಎಂದು ಕೋಚ್ ಈಗಾಗಲೇ ಸೂಚನೆ ನೀಡಿದ್ದಾರೆ. ಆದ್ದರಿಂದ ನಾನು ಯಾವುದೇ ಕ್ರಮಾಂಕದಲ್ಲಿ ಆದರೂ ಆಡಲು ಸಿದ್ಧವಾಗಿದ್ದೇವೆ ಎಂದು ಹೇಳಿದರು. 

ವಿಶ್ವಕಪ್ ಟೂರ್ನಿ ಇಂಗ್ಲೆಂಡ್ ನಲ್ಲಿ ನಡೆಯಲಿದ್ದು ಅಲ್ಲಿ ಎದುರಾಗಬಹುದಾದ ಯಾವುದೇ ಸವಾಲನ್ನು ಎದುರಿಸಲು ನಾನು ಸಿದ್ಧ. ತಂಡ ಕೈಗೊಂಡಿರುವ ನಿರ್ಧಾರಕ್ಕೆ ಪೂರಕವಾಗಿ ಆಡುತ್ತೇನೆ. ಟೀಂ ಇಂಡಿಯಾ ಎ ತಂಡದ ಪರ ಆಡಿರುವ ಅನುಭವ ನನ್ನಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದೆ ಅಲ್ಲದೇ ಐಪಿಎಲ್ ಕೂಡ ತಮ್ಮ ವಿಶ್ವಕಪ್ ನಲ್ಲಿ ತಯಾರಿಗೆ ಸಹಕಾರಿ ಆಗಲಿದೆ ಎಂದಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp