ಎಂಎಸ್ ಧೋನಿ ಇದ್ದರೆ 2023ರ ವಿಶ್ವಕಪ್‌ಗೆ ನಾನು ಕಮ್ ಬ್ಯಾಕ್ ಮಾಡುತ್ತೇನೆ: ಡಿವಿಲಿಯರ್ಸ್

ಅದಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಎಂಎಸ್ ಧೋನಿ ಇದ್ದರೆ ನಾನು 2023ರ ವಿಶ್ವಕಪ್‌ಗೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್-ಎಂಎಸ್ ಧೋನಿ
ಎಬಿ ಡಿವಿಲಿಯರ್ಸ್-ಎಂಎಸ್ ಧೋನಿ
ಬೆಂಗಳೂರು: ಅದಾಗಲೇ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಎಂಎಸ್ ಧೋನಿ ಇದ್ದರೆ ನಾನು 2023ರ ವಿಶ್ವಕಪ್‌ಗೆ ಕಮ್ ಬ್ಯಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ನಿವೃತ್ತಿ ಘೋಷಣೆ ವೇಳೆ ನನಗೆ 2019ರ ವಿಶ್ವಕಪ್ ಆಡುವ ಆಸೆ ಇತ್ತು. ಆದರೆ 2023ರ ವಿಶ್ವಕಪ್‌ಗೆ ಬೇಕಾದರೆ ಕಮ್ ಬ್ಯಾಕ್ ಮಾಡುತ್ತೇನೆ. ಆದರೆ ಈ ವೇಳೆ ಧೋನಿ ಕೂಡ ಇರಬೇಕು ಎಂದಿದ್ದಾರೆ. ಆ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿ ಎಷ್ಟು ಪ್ರೇರಣೆ ನೀಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ನಿವೃತ್ತಿ ವೇಳೆ ಹಲವರ ಟೀಕೆಗಳನ್ನು ನಾನು ಎದುರಿಸಿದ್ದೇ. ಆಗ ನನಗೆ ಬಹಳ ಕಷ್ಟವೆನಿಸಿತ್ತು. ಆದರೆ ಈ ವಯಸ್ಸಿನಲ್ಲೂ ಧೋನಿ ಆಟ ಉತ್ತಮವಾಗಿದೆ. ಧೋನಿ 2023ರವರೆಗೆ ಇದ್ದರೆ ನಾನು ವಿಶ್ವಕಪ್‌ಗೆ ಬರುತ್ತೇನೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಡಿವಿಲಿಯರ್ಸ್ ಆಫ್ರಿಕಾ ಪರ 114 ಟೆಸ್ಟ್ ಪಂದ್ಯ ಆಡಿದ್ದು 8,765 ರನ್ ಬಾರಿಸಿದ್ದಾರೆ. 22 ಶತಕ, 46 ಅರ್ಧ ಶತಕ ಸಿಡಿಸಿದ್ದಾರೆ. 228 ಏಕದಿನ ಪಂದ್ಯಗಳ ಪೈಕಿ 9,577 ರನ್ ಗಳಿಸಿದ್ದಾರೆ. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com