ವಿಶ್ವಕಪ್‌ನಲ್ಲಿ ಆಡಲಿರುವ ಎಲ್ಲಾ ತಂಡದ ಆಟಗಾರರ ಪೈಕಿ 'ಶತಕ'ದಲ್ಲಿ ಕೊಹ್ಲಿಯೇ ಅಗ್ರಜ, ವೇಗಿಗಳಿಗೆ ಢವ ಢವ!

ಜಗತ್ತಿನ ಸ್ಟಾರ್ ಬ್ಯಾಟ್ಸ್ ಮನ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಎಲ್ಲಾ ತಂಡಗಳ ಆಟಗಾರರ ಪೈಕಿ ಶತಕದಲ್ಲಿ ಅಗ್ರಸ್ಥಾನದಲ್ಲಿದ್ದು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ಜಗತ್ತಿನ ಸ್ಟಾರ್ ಬ್ಯಾಟ್ಸ್ ಮನ್, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಎಲ್ಲಾ ತಂಡಗಳ ಆಟಗಾರರ ಪೈಕಿ ಶತಕದಲ್ಲಿ ಅಗ್ರಸ್ಥಾನದಲ್ಲಿದ್ದು ಇತರ ತಂಡಗಳ ವೇಗಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ.
ಮೇ 30 ರಿಂದ ಇಂಗ್ಲೆಂಡ್ ನಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್ ನಲ್ಲಿ ಶತಕಗಳ ದಾಖಲೆಯಲ್ಲಿ ಹಲವು ತಂಡಗಳಿಗಿಂತ ಮುಂದಿದ್ದಾರೆ. 
ವಿರಾಟ್ ಕೊಹ್ಲಿ, ತಮ್ಮ ವೃತ್ತಿ ಜೀವನದಲ್ಲಿ 227 ಪಂದ್ಯಗಳನ್ನು ಆಡಿದ್ದು, 41 ಬಾರಿ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ವಿಶ್ವದಾಖಲೆಯ ಶತಕ ವೀರ ಸಚಿತ್ ತೆಂಡೂಲ್ಕರ್ ಅವರ ದಾಖಲೆಯ ಬೆನ್ನು ಹತ್ತಿದ್ದಾರೆ. ಇನ್ನು ಎಂಟು ಶತಕ ಬಾರಿಸಿ, ಸಚಿನ್ ದಾಖಲೆಯ ಸಮಕ್ಕೆ ನಿಲ್ಲುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. 
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ಶತಕಗಳು ಹಲವು ತಂಡಗಳ ಒಟ್ಟು ಶತಕಗಳಾಗಿವೆ. ಶತಕಗಳ ಲೆಕ್ಕಾಚಾರದಲ್ಲಿ ಎಲ್ಲ ಒಂಬತ್ತು ತಂಡಗಳಿಗೂ ವಿರಾಟ್ ಬ್ಯಾಟಿಂಗ್ ಭಯ ಇದೆ. ವಿರಾಟ್, ಉಪನಾಯಕ ರೋಹಿತ್ ಶರ್ಮಾ, ಆರಂಭಿಕ ಶಿಖರ್ ಧವನ್ ಅವರ ಶತಕಗಳ ಸಂಖ್ಯೆ ಒಂಬತ್ತು ತಂಡಗಳಿಗೆ ಭಯ ಹುಟ್ಟಿಸಿದೆ. 
ವಿರಾಟ್ ಅವರ 41 ಶತಕಗಳು ವಿಶ್ವಕಪ್ ನಲ್ಲಿ ಭಾಗವಹಿಸುತ್ತಿರುವ ಹಲವು ತಂಡಗಳಿಗಿಂತಲೂ ಮುಂಚೂಣಿಯಲ್ಲಿದ್ದಾರೆ. ಅಫ್ಘಾನಿಸ್ತಾನ್ ತಂಡ 13, ಬಾಂಗ್ಲಾದೇಶ 31, ಶ್ರೀಲಂಕಾ 13, ವೆಸ್ಟ್ ಇಂಡೀಸ್ ತಂಡಗಳು ಒಟ್ಟು 40 ಶತಕ ಬಾರಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com