ವಿಶ್ವಕಪ್ ಮಹಾಸಮರ: ತೀವ್ರ ವಿರೋಧದ ಬಳಿಕ ಪಾಕ್ ಸಮರ್ಥ ತಂಡ ಪ್ರಕಟಿಸಿದ ಪಿಸಿಬಿ!

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-0 ಅಂತರದಿಂದ ಪಾಕಿಸ್ತಾನ ಹೀನಾಯ ಸರಣಿ ಸೋಲು ಕಂಡಿದ್ದು ಇದರ ಬೆನ್ನಲ್ಲೇ ಇದೀಗ ಪಾಕ್ ಕ್ರಿಕೆಟ್ ಮಂಡಳಿ...

Published: 20th May 2019 12:00 PM  |   Last Updated: 20th May 2019 06:44 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಇಸ್ಲಾಮಾಬಾದ್: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ 4-0 ಅಂತರದಿಂದ ಪಾಕಿಸ್ತಾನ ಹೀನಾಯ ಸರಣಿ ಸೋಲು ಕಂಡಿದ್ದು ಇದರ ಬೆನ್ನಲ್ಲೇ ಇದೀಗ ಪಾಕ್ ಕ್ರಿಕೆಟ್ ಮಂಡಳಿ ವಿಶ್ವಕಪ್ ಮಹಾಸಮರಕ್ಕಾಗಿ 15 ಆಟಗಾರರ ಅಧಿಕೃತ ತಂಡವನ್ನು ಪಾಕ್ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು ವೇಗಿ ಮೊಹಮ್ಮದ್ ಅಮೀರ್ ಗೆ ಸ್ಥಾನ ನೀಡಲಾಗಿದೆ.

ಈ ಹಿಂದೆ ಪಿಸಿಬಿ ವಿಶ್ವಕಪ್ ಟೂರ್ನಿಗಾಗಿ ಪಾಕಿಸ್ತಾನ ಪ್ರಾಥಮಿಕ ತಂಡವನ್ನು ಪ್ರಕಟಿಸಿತ್ತು. ಈ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. ಇದರಿಂದ ಎಚ್ಚೇತ ಪಿಸಿಬಿ ಇದೀಗ ಹಲವು ಬದಲಾವಣೆ ಮಾಡಿದೆ. ಈ ಪೈಕಿ ಮೊಹಮ್ಮದ್ ಅಮೀರ್, ವಹಾಬ್ ರಿಯಾಝ್ ಹಾಗೂ ಆಸಿಫ್ ಅಲಿಗೆ ಸ್ಥಾನ ನೀಡಲಾಗಿದೆ.

ಇದಕ್ಕೂ ಮೊದಲು ಆಯ್ಕೆ ಮಾಡಲಾಗಿದ್ದ ಅಬಿದ್ ಅಲಿ, ಫಾಹಿಮ್ ಅಶ್ರಫ್ ಹಾಗೂ ಜುನೈದ್ ಖಾನ್ ರನ್ನು ತಂಡದಿಂದ ಕೊಕ್ ಕೊಡಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ತಂಡ:
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp