ಏಕದಿನ ವಿಶ್ವಕಪ್ ಅತ್ಯಂತ ಸವಾಲಿನಿಂದ ಕೂಡಿರಲಿದೆ: ವಿರಾಟ್ ಕೊಹ್ಲಿ

ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಮುಂಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಈ ಬಾರಿಯ ವಿಶ್ವಕಪ್ ಅತ್ಯಂತ ಸವಾಲಿನಿಂದ ಕೂಡಿರಲಿದೆ ಎಂದು ಹೇಳಿದ್ದಾರೆ.
ಮೇ 29ರಿಂದ ವಿಶ್ವಕಪ್ ಆರಂಭಗೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಇಂದು ರಾತ್ರಿ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದು ಪ್ರಯಾಣಕ್ಕೂ ಮುನ್ನ ತಂಡದ ಕೋಚ್ ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದರು.
ನಮಗೆ ಒತ್ತಡವನ್ನು ನಿಭಾಯಿಸುವುದು ಕಷ್ಟವಾಗಿರುತ್ತದೆ ಹೊರತು ಅಲ್ಲಿನ ಪರಿಸ್ಥಿತಿಯನ್ನಲ್ಲ. ಬೇಗನೆ ಇಂಗ್ಲೆಂಡ್ ಗೆ ತೆರಳುವುದರಿಂದ ಬಹುಬೇಗ ನಾವು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಬಹುದು ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಾವು ನಮ್ಮ ಸಮರ್ಥ್ಯಕ್ಕೆ ತಕ್ಕ ಆಟವಾಡಿದಾಗ ಗೆಲುವು ನಮ್ಮದಾಗಲಿದೆ. ನಮ್ಮ ಕೌಶಲ್ಯಕ್ಕೆ ತಕ್ಕಂತೆ ಅತ್ಯುತ್ತಮ ಸಿದ್ಧತೆಯನ್ನು ನಡೆಸಿದ್ದೇವೆ. ಅಲ್ಲದೆ ಯಾವ ಎದುರಾಳಿಗಳ ಬಗ್ಗೆಯೂ ಚಿಂತಿಸುತ್ತಿಲ್ಲ ಎಂದು ಹೇಳಿದರು.
ಟೂರ್ನಿಯಲ್ಲಿ ತಂಡ ತನ್ನ ಕ್ಷಮತೆಗೆ ತಕ್ಕ ಪ್ರದರ್ಶನ ನೀಡಬೇಕಿದೆ. ಇಂಗ್ಲೆಂಡ್ ಪಿಚ್ ಗಳು ಫ್ಲ್ಯಾಟ್ ಇದ್ದು, ವಾತಾವರಣ ಬಹು ಮುಖ್ಯ ಪಾತ್ರ ವಹಿಸಲಿದೆ. ಈ ಬಾರಿ ವಿಶ್ವಕಪ್ ಗೆ ಎಂಟು ದಿನ ಮುನ್ನ ತಂಡ, ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದು, ವಾತಾವರಣಕ್ಕೆ ಹೊಂದಿಕೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ. 

ಭಾರತ ವಿಶ್ವಕಪ್ ನಲ್ಲಿ ತನ್ನ ಅಭಿಯಾನವನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಸಲಿದೆ. ಮೇ 25 ಹಾಗೂ 28 ರಂದು ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶಗಳ ವಿರುದ್ಧ ಅಭ್ಯಾಸ ಪಂದ್ಯ ಆಡಲಿದ್ದು, ಜೂ.9ರಂದು ಆಸ್ಟ್ರೇಲಿಯಾ, ಜೂ. 13 ನ್ಯೂಜಿಲೆಂಡ್, ಜೂ.16 ಪಾಕ್ ವಿರುದ್ಧ ಪಂದ್ಯ ಆಡಲಿದೆ. 

ನಮ್ಮ ತಂಡದ ಬೌಲರ್ ಗಳು ಏಕದಿನ ಸರಣಿಗೆ ತಾಲೀಮು ನಡೆಸಿದ್ದಾರೆ. ಐಪಿಎಲ್ ನಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿದಾಗ ಆಯಸವಾಗಿದ್ದು ಕಾಣಲಿಲ್ಲ. 50 ಓವರ್ ಗಳ ಕ್ರಿಕೆಟ್ ನಲ್ಲಿ ಸಂಪೂರ್ಣ ಫಿಟ್ ಆಗಿರುವುದು ಬಹು ಮುಖ್ಯ. ಹೀಗಾಗಿ ಐಪಿಎಲ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾದ ಬೌಲರ್ ಗಳಿಗೆ ತಿಳಿಸಲಾಗಿತ್ತು.  
ಟೀಂ ಇಂಡಿಯಾ ತಂಡ
ವಿರಾಟ್ ಕೊಹ್ಲಿ (ನಾಯಕ)
ರೋಹಿತ್ ಶರ್ಮಾ (ಉಪನಾಯಕ)
ಶಿಖರ್ ಧವನ್
ಕೆಎಲ್ ರಾಹುಲ್
ವಿಜಯ್ ಶಂಕರ್ 
ಕೇದಾರ್ ಜಾದವ್
ದಿನೇಶ್ ಕಾರ್ತಿಕ್
ಎಂಎಸ್ ಧೋನಿ
ಕುಲದೀಪ್ ಯಾದವ್
ಭುವನೇಶ್ವರ್ ಕುಮಾರ್
ಯಜುವೇಂದ್ರ ಚಹಾಲ್
ಜಸ್ ಪ್ರೀತ್ ಬುಮ್ರಾ
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ 
ಮೊಹಮ್ಮದ್ ಶಮಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com