'ಸಾಕಷ್ಟು ಕ್ರಿಕೆಟ್ ಆಡಿದ್ದೇನೆ.. ಈಗ'...: ನಿವೃತ್ತಿ ಪ್ಲಾನ್ ಮಾಡಿದ್ರಾ ಧೋನಿ!

ಭಾರತ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕುರಿತು ನಿರ್ಧರಿಸಿದ್ದಾರೆಯೇ..? ಈ ಪ್ರಶ್ನೆಗೆ ಸ್ವತಃ ಧೋನಿ ಅವರೇ ಉತ್ತರಿಸಿದ್ದು, ಧೋನಿಯ ಒಂದು ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

Published: 21st May 2019 12:00 PM  |   Last Updated: 21st May 2019 12:18 PM   |  A+A-


MS Dhoni Hints At Post-Retirement Plans In Viral Video: Reports

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಭಾರತ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕುರಿತು ನಿರ್ಧರಿಸಿದ್ದಾರೆಯೇ..? ಈ ಪ್ರಶ್ನೆಗೆ ಸ್ವತಃ ಧೋನಿ ಅವರೇ ಉತ್ತರಿಸಿದ್ದು, ಧೋನಿಯ ಒಂದು ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಐಸಿಸಿ ವಿಶ್ವಕಪ್ ಸರಣಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯತ್ತ ಚಿಂತನೆ ಮಾಡಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಇದಕ್ಕೆ ಸ್ವತಋ ಧೋನಿ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೊವೊಂದು ಕಾರಣವಾಗಿದ್ದು, ವಿಡಿಯೋದಲ್ಲಿ ತಾವು ನಿವೃತ್ತಿ ಬಳಿಕ ಮಾಡುವ ಒಂದು ಇಷ್ಟದ ಕೆಲಸದ ಕುರಿತು ಧೋನಿ ಮಾತನಾಡಿದ್ದಾರೆ.

ಹೌದು.. ಈ ವಿಡಿಯೋದಲ್ಲಿ ಧೋನಿ ತಾವು ನಿವೃತ್ತಿ ಬಳಿಕ ಪೇಯಿಟಿಂಗ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದು, ಬಿಡುವಿನ ಸಂದರ್ಭದಲ್ಲಿ ತಾವು ಬಿಡಿಸಿದ ಮೂರು ಪೇಯಿಟಿಂಗ್ ಗಳನ್ನು ಕೂಡ ವಿಡಿಯೋದಲ್ಲಿ ತೋರಿಸಿದ್ದಾರೆ.

'ಚಿಕ್ಕಂದಿನಿಂದಲೂ ನನಗೆ ಪೇಟಿಂಗ್ ಅಂದ್ರೆ ಇಷ್ಟ.. ಇಷ್ಟು ದಿನ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ನಾನು ಯಾವಾಗಲೂ ಓರ್ವ ಚಿತ್ರಕಾರನಾಗಬೇಕು ಎಂದು ಆಸೆ ಪಟ್ಟಿದ್ದೆ. ಈಗ ಅದಕ್ಕೆ ಸಮಯ ಬಂದಿದ್ದು, ಈಗ ನಾನು ನನ್ನಿಷ್ಟದ ಚಟುವಟಿಕೆಯಲ್ಲಿ ಭಾಗಿಯಾಗುತ್ತೇನೆ ಎಂದು ಹೇಳುವ ಮೂಲಕ ನಿವೃತ್ತಿ ಕುರಿತಂತೆ ಪರೋಕ್ಷ ಹಿಂಟ್ ನೀಡಿದ್ದಾರೆ.

ಇನ್ನು ಧೋನಿ ಅವರ ಈ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಧೋನಿ ಯಾವುದೇ ಕಾರಣಕ್ಕೂ ಕ್ರಿಕೆಟ್ ಬಿಡಬಾರದು ಎಂದು ಕೆಲವರು ಟ್ವೀಟ್ ಮಾಡಿದ್ದರೆ, ಮತ್ತೆ ಕೆಲವರು ಧೋನಿ ಅವರಿಗೆ ಇಷ್ಟದ ಕಾರ್ಯವನ್ನು ಆಯ್ಕೆ ಮಾಡುವ ಹಕ್ಕಿದೆ ಎಂದು ಹೇಳುವ ಮೂಲಕ ಧೋನಿ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ.

ಒಟ್ಟಾರಿ ಇದೀಗ ಧೋನಿ ವಿಡಿಯೋ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp